ಹಿಂಜಾವೇ ಯಿಂದ ಪಂಜಿನ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ಅಖಂಡ ಭಾರತ ಸಂಕಲ್ಪ ದಿನ

ಹಿಂಜಾವೇ ಯಿಂದ ಪಂಜಿನ ಮೆರವಣಿಗೆ





ಮೂಡುಬಿದಿರೆ : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ತಾಲೂಕಿನ 

ಹಿಂದು ಜಾಗರಣ ವೇದಿಕೆ ವತಿಯಿಂದ ಭಾನುವಾರ ಸಂಜೆ ಸಾವಿರ ಕಂಬದ ಬಸದಿ ಬಳಿಯಿಂದ ಮೂಡುಬಿದಿರೆ ಸಮಾಜ ಮಂದಿರದ ವರೆಗೆ

 ಬೃಹತ್ ಪಂಜಿನ ಮೆರವಣಿಗೆ ನಡೆಯಿತು.


ಮೆರವಣಿಗೆಗೆ ಸಾವಿರ ಕಂಬದ ಬಳಿ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಚಾಲನೆ ನೀಡಿದರು. 


  ನಂತರ ಸಮಾಜ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ  ಹಿಂದೂ ಜಾಗರಣ ವೇದಿಕೆಯ ಕಾರ್ಯಕಾರಿಣಿ ಸದಸ್ಯ ಗಣರಾಜ ಭಟ್ ಕೆದೀಲ ದಿಕ್ಸೂಚಿ ಭಾಷಣ ಮಾಡಿ ನಾವು ತಾಯಿಯೆಂದು ಆರಾಧಿಸುವ ದೇಶವಿದ್ದರೆ ಅದು ಭಾರತ ದೇಶ. ನಮಗೆ 1947 ರ ಮಧ್ಯ ರಾತ್ರಿ ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ ಸಿಕ್ಕಿದನ್ನು ನಾವು ಆಗಸ್ಟ್ 15 ರಂದು ಆಚರಿಸಿ ಸಂಭ್ರಮಿಸುತ್ತಾ ಬಂದಿದ್ದೇವೆ. ಇದು ಶಾಂತಿಯಿಂದ ಬಂದ ಸ್ವಾತಂತ್ರ್ಯ ಅಲ್ಲ, ಒಂದು ಕೆನ್ನೆಗೆ ಬಡಿದರೆ ಇನ್ನೊಂದು ಕೆನ್ನೆಯನ್ನು ತೋರಿಸಿ ಬಂದ ಸ್ವಾತಂತ್ರ್ಯವೂ ಅಲ್ಲ. ಕೇವಲ ಸತ್ಯಾಗ್ರಹದಿಂದ ಬಂದ ಸ್ವಾತಂತ್ರ್ಯವೂ ಅಲ್ವೇ ಅಲ್ಲ. ಸ್ವಾತಂತ್ರ್ಯ ಗಳಿಕೆಯ ಹಿಂದೆ ಲಕ್ಷ ಲಕ್ಷ ಜನರ ರಕ್ತವಿದೆ, ತ್ಯಾಗವಿದೆ, ಬಲಿದಾನವಿದೆ  ಎಂಬುದನ್ನು ನೆನಪಿಸಲು ಅಖಂಡ ಭಾರತ ಸಂಕಲ್ಪ ದಿನ.

  ಈ ಬಗ್ಗೆ ಹೊಸತ್ತೇನೂ ಹೇಳಲು ಇಲ್ಲ ಪ್ರತಿವರ್ಷವೂ ಹೇಳಿದ್ದನ್ನೇ ಹೇಳುವುದು ಕಳೆದು ಹೋದ ತಂತುಗಳೆಲ್ಲಾ ಅಖಂಡವಾಗಿ ಭಾರತಿಯರು ಕಾಣುವವರೆಗೆ. ನಮಗೆ ಸ್ವಾತಂತ್ರ್ಯ ಸಿಗುವ ಮೊದಲು ಪಾಕಿಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಯಾರಿಗೋ ಇಬ್ಬರಿಗೆ ಬೇಜಾರಾಗುತ್ತದೆ ಎಂಬ ನೆಲೆಯಲ್ಲಿ   ದೇಶವನ್ನು ವಿಂಗಡನೆ ಮಾಡಿ ಹಿಂದೂಗಳಿಗೆ ಹಿಂದೂಸ್ಥಾನ್ ಮುಸಲ್ಮಾನರಿಗೆ ಪಾಕಿಸ್ಥಾನ ಎಂಬ ಮೂಲಕ ಹಿಂದುಗಳ ಮನಸಿನ ಭಾವನೆಗಳು ಕತ್ತರಿಸಲ್ಪಟ್ಟಿತು ಹಾಗೂ ದೇಶ ವಿಭಜನೆಯಾಗುವ ಮೊದಲು ಭಜನೆಯ ವಿಭಜನೆ, ರಾಷ್ಟ್ರ ಗೀತೆ, ರಾಷ್ಟ್ರ ಧ್ವಜಗಳ ವಿಭಜನೆ ಮಾಡಲಾಯಿತು ಆದರೆ ನಾವು ಇಂದಿಗೂ ಅದೇ ರಾಷ್ಟ್ರ ಧ್ವಜಕ್ಕೆ ಗೌರವವನ್ನು ನೀಡುತ್ತಿದ್ದೇವೆ ಆದರೆ ಉದ್ದೇಶ ಪೂರ್ವಕವಾಗಿಯೇ  ಕೆಲವು ಕಡೆ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸುತ್ತಿದ್ದಾರೆಂದು ವಿಷಾಧ ವ್ಯಕ್ತ ಪಡಿಸಿದ ಅವರು ನಾವೆಲ್ಲರೂ ಒಂದಾಗಿ ಸದೃಢವಾದ ದೇಶವನ್ನು ಕಟ್ಟಲು ಒಂದಾಗಬೇಕಿದೆ ಎಂದರು.

 

ಉದ್ಯಮಿ ಸತ್ಯ ಪ್ರಕಾಶ್ ಹೆಗ್ಡೆ   ಅವರು ಅಧ್ಯಕ್ಷತೆ ವಹಿಸಿದ್ದರು.

  ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ತಾಲೂಕು ಸಂಯೋಜಕ ಸಂದೀಪ್ ಹೆಗ್ಡೆ .ತಾಲೂಕು ಸಹಸಂಯೋಜಕ ಶರತ್ ಮಿಜಾರ್, ತಾಲೂಕು ಸಹಸಂಯೋಜಕ ಸಂತೋಷ್ ಕುಮಾರ್ ಜೈನ್ ತಾಲೂಕು ಪ್ರಮುಖರಾದ ಯತೀಶ್ ಕೋಟ್ಯಾನ್ ಸುನಿಲ್ ನಂದೊಟ್ಟು ಹರಿಚಂದ್ರ ಕೆ ಸಿ ಅನುಜ್ ಭಂಡಾರಿ ಮೋಕ್ಷಿತ್ ಶೆಟ್ಟಿ ಬಿಜೆಪಿ ಮುಖಂಡರಾದ ಲಕ್ಷ್ಮಣ್ ಪೂಜಾರಿ ಅಶೋಕ್ ಶೆಟ್ಟಿ ಬೇಲೊಟ್ಟು ಆರ್ ಎಸ್ ಎಸ್ ಪ್ರಮುಖರಾದ ಮಂಜುನಾಥ್ ಶೆಟ್ಟಿ, ಸುಕೇಶ್ ನಿಡ್ಡೋಡಿ ಮತ್ತಿತರರು ಉಪಸ್ಥಿತರಿದ್ದರು

 ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಗಣೇಶ್ ಬಿ.ಅಳಿಯೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments