ಸ್ಫೂರ್ತಿ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಸರ್ವೋದಯ ಫ್ರೆಂಡ್ಸ್ ನ ಲಾಂಛನ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಸ್ಫೂರ್ತಿ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

 ಸರ್ವೋದಯ ಫ್ರೆಂಡ್ಸ್ ನ ಲಾಂಛನ ಬಿಡುಗಡೆ



ಮೂಡುಬಿದಿರೆ:  ಸರ್ವೆ ಜನ ಸುಖಿನೋ ಭವಂತು ಎಂಬ ಘೋಷ ವಾಕ್ಯದೊಂದಿಗೆ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳೊಂದಿಗೆ ಪ್ರಾರಂಭಗೊಂಡಿರುವ ಸರ್ವೋದಯ ಫ್ರೆಂಡ್ಸ್ ಸಂಸ್ಥೆ ಇಂದಿಗೆ 15ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸ್ಪೂರ್ತಿ ವಿಶೇಷ ಶಾಲಾ ಮಕ್ಕಳೊಂದಿಗೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದೊಂದಿಗೆ ಸರ್ವೋದಯ ಫ್ರೆಂಡ್ಸ್ ನ ಹೊಸ ಲಾಂಛನವನ್ನು ಬಿಡುಗಡೆ ಮಾಡಿತು.



ಪಂಚಶಕ್ತಿಯ ಮಾಲಕ,ಸರ್ವೋದಯ ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷ ರಂಜಿತ್ ಪೂಜಾರಿ ಧ್ವಜರೋಹಣಗೈದರು.  ಶಾಲೆಯ ಸಂಚಾಲಕರ ಪ್ರಕಾಶ್ ಶೆಟ್ಟಿಗಾರ್, ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರುದೇವಾಡಿಗ, ಕಾರ್ಯದರ್ಶಿ ಗುರು ಅಂಚನ್  ಒಂಟಿಕಟ್ಟೆ, ಅಮರ್ ಕೋಟೆ ಮೂಡುಬಿದಿರೆ,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ತಾಲೂಕು ಘಟಕದ ಅಧ್ಯಕ್ಷ ಆದಿತ್ಯ, ಎನ್ಎಸ್ ಯು ಘಟಕದ ಶ್ರವಣ್ ಆಳ್ವ, ಸ್ಪೂರ್ತಿ ಶಾಲೆಯ  ರಕ್ಷಕರ ಸಂಘದ  ಅಧ್ಯಕ್ಷೆ ಲತಾ ಸುರೇಶ್ ಈ ಸಂದರ್ಭದಲ್ಲಿದ್ದರು.





Post a Comment

0 Comments