ಅಖಂಡ ಭಾರತ ಸಂಕಲ್ಪಕ್ಕಾಗಿ ವಿಹಿಂಪ ಬಜರಂಗದಳದಿಂದ ಪಂಜಿನ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ಅಖಂಡ ಭಾರತ ಸಂಕಲ್ಪಕ್ಕಾಗಿ  ವಿಹಿಂಪ ಬಜರಂಗದಳದಿಂದ ಪಂಜಿನ ಮೆರವಣಿಗೆ



ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಜನಜಾಗೃತಿಗಾಗಿ  ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ ಮೂಡುಬಿದಿರೆಯ ಸಾವಿರ ಕಂಬದ ಬಸದಿ ಬಳಿಯಿಂದ ಸ್ವರಾಜ್ಯ ಮೈದಾನದ ವರೆಗೆ  ಪಂಜಿನ ಮೆರವಣಿಗೆ ನಡೆಯಿತು.



1947 ರ ಆಗಸ್ಟ್ 14 ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಕಳೆದು ಹೋದ ಭಾಗಗಳನ್ನು ಮತ್ತೆ ಒಂದು ಗೂಡಿಸುವರೆಗೆ ಎಂಬ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಂಜಿನ ಮೆರವಣಿಗೆಗೆ ಚಾಲನೆಯನ್ನು ನೀಡಿ ಮಾತನಾಡಿ 1947 ರ ಸಂದರ್ಭ ಬ್ರಿಟಿಷರ ಹುನ್ನಾರದಿಂದಾಗಿ ಅಖಂಡವಾಗಿದ್ದ ಭಾರತ ದೇಶವು ಮೂರು ದೇಶವಾಗಿ ಬೇರ್ಪಟ್ಟಿತು. ಈ ಹಿಂದೆ ಪಶ್ಚಿಮ ಬಂಗಾಳ, ಪಾಕಿಸ್ಥಾನ ಹಾಗೂ ಭಾರತವು ಒಂದೇ ಆಗಿತ್ತು. ಮೌರ್ಯರ, ರಾಷ್ಟ್ರಕೂಟರು ಹಾಗೂ ಅದಕ್ಕಿಂತಲೂ ಹಿಂದಿನ ಕಾಲದಲ್ಲಿ ನಮ್ಮ ನೆಲ, ಜಲ, ಬೆಟ್ಟಗುಡ್ಡಗಳು ಎಲ್ಲವೂ ಒಂದಾಗಿ ಅಖಂಡವಾಗಿದ್ದು ಶಕ್ತಿಯುತವಾಗಿತ್ತು ಇದನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಬ್ರಿಟಿಷರು ಮತ್ತು ರಾಜಕರಣಿಗಳ ಹುನ್ನಾರದಿಂದಾಗಿ ತ್ರಿಖಂಡವಾಗಿರುವ ಭಾರತವು ಅಖಂಡವಾಗಿ ಮತ್ತೊಮ್ಮೆ ಪ್ರಜ್ವಲಿಸಬೇಕಾಗಿದೆ ಎಂದು ಹಾರೈಸಿದರು.

ವಿಹಿಂಪ ಬಜರಂಗದಳದ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ದಿಕ್ಸೂಚಿ ಭಾಷಣ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಲು ಸುಮಾರು 6 ಲಕ್ಷದಷ್ಟು ಜನರ ತ್ಯಾಗ ಬಲಿದಾನವಿದೆ. ತುಂಡು ತುಂಡಾಗಿ ಉಳಿದಿರುವ ಭಾರತದಲ್ಲಿ ನಾವಿಂದು ಸಂಭ್ರಮವನ್ನು ಆಚರಿಸುತ್ತಿದ್ದೇವೆ.ಇಂದು ದೇಶ ದುಸ್ಥಿತಿಯತ್ತ ಸಾಗಿದೆ. ದೇಶದಲ್ಲಿ ಮತಾಂತರ, ಲವ್ ಜಿಹಾದ್, ಗೋಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಈ ಬಗ್ಗೆ ರಾಜಕೀಯ, ಜಾತಿಯನ್ನು ಮೀರಿ ನಾವೆಲ್ಲರೂ ಸಂಘಟಿತರಾಗಬೇಕು ಈ ಮೂಲಕ  ತ್ರಿಖಂಡವಾಗಿ ಕತ್ತರಿಸಲ್ಪಟ್ಟ ನಮ್ಮ ದೇಶವನ್ನು ಅಖಂಡವಾಗಿಸಲು ನಾವೆಲ್ಲರು ಕಟಿ ಬದ್ದರಾಗಬೇಕೆಂದು ಹೇಳಿದರು.

ವಿಹಿಂಪ ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು.

ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ಬಜರಂಗದಳದ ತಾಲೂಕು ಸಂಚಾಲಕ ಅಭಿಲಾಷ್ ಅರ್ಜುನಾಪುರ, ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಲಕ್ಷ್ಮಣ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್, ಶಾಂತಾರಾಮ ಕುಡ್ವ ಅಶ್ವತ್ ಪಣಪಿಲ ಮತ್ತಿತರ ಮಖಂಡರುಗಳು, ದುರ್ಗಾವಾಹಿನಿಯ ಹಾಗೂ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.ಸುಚೇತನ್ ಜೈನ್ ಕಾರ್ಯ ಕ್ರಮ ನಿರೂಪಿಸಿದರು

Post a Comment

0 Comments