ಮೂಡುಬಿದಿರೆ ಎಕ್ಸಲೆಂಟ್ ನ ಚಿನ್ಮಯ್ ಬೋರ್ಕರ್ , ಅನಂತಕೃಷ್ಣ ದೇಸಾಯಿ ಐಐಟಿ ಚೆನೈ, ಏಮ್ಸ್ ಗೆ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಎಕ್ಸಲೆಂಟ್ ನ   ಚಿನ್ಮಯ್ ಬೋರ್ಕರ್ , ಅನಂತಕೃಷ್ಣ ದೇಸಾಯಿ ಐಐಟಿ ಚೆನೈ, ಏಮ್ಸ್ ಗೆ ಆಯ್ಕೆ



ಮೂಡುಬಿದಿರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಚಿನ್ಮಯ್ ಬೋರ್ಕರ್ ಜೆಇಇ ಅಡ್ವಾನ್ಸ್ 2023 ಅಖಿಲ ಭಾರತ ಮಟ್ಟದಲ್ಲಿ 1398ನೇ ರ‍್ಯಾಂಕ್ ಪಡೆದಿದ್ದಾರೆ. 

ಕೆಸಿಇಟಿಯಲ್ಲೂ ಉತ್ತಮ ಸಾಧನೆ ಮಾಡಿದ ಚಿನ್ಮಯ್ ಇಂಜಿನಿಯರಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ 92ನೇ ರ‍್ಯಾಂಕ್‌ನೊಂದಿಗೆ ಪ್ರತಿಷ್ಠಿತ ಮದ್ರಾಸ್ ಐಐಟಿ ಗೆ ಆಯ್ಕೆಯಾಗಿದ್ದಾರೆ. ಈತ ಮೂಡುಬಿದಿರೆ ಅಲಂಗಾರಿನ ರಾಧಕೃಷ್ಣ ಬೋರ್ಕರ್-ಉಷಾ ಆರ್ ಬೋರ್ಕರ್ ದಂಪತಿಯ ಪುತ್ರ.

ಇದೇ ಕಾಲೇಜಿನ ಅನಂತಕೃಷ್ಣ ದೇಸಾಯಿ ನೀಟ್ ಪರೀಕ್ಷೆಯಲ್ಲಿ 663ಅಂಕಗಳನ್ನು ಪಡೆದಿದ್ದು ಪ್ರತಿಷ್ಠಿತ ಮಧುರೈ ಯ ಏಮ್ಸ್ ಕಾಲೇಜಿಗೆ ಆಯ್ಕೆಯಾಗಿದ್ದಾರೆ.ಈತ ಶ್ರೀನಿವಾಸ್ ಎ ದೇಸಾಯಿ,ಸರೋಜ ಎಸ್ ದೇಸಾಯಿ ದಂಪತಿ ಯ ಪುತ್ರ.

ಸಾಧಕ ವಿದ್ಯಾರ್ಥಿಗಳನ್ನು  ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Post a Comment

0 Comments