ಸಂಪಿಗೆ ಚಚ್ ೯ನಲ್ಲಿ ರಕ್ತದಾನ ಶಿಬಿರ : 50 ಯುನಿಟ್ ರಕ್ತ ಸಂಗ್ರಹ
ಮೂಡುಬಿದಿರೆ: ಪವಿತ್ರಾತ್ಮ ದೇವಾಲಯ ಸಂಪಿಗೆ, ಭಾರತೀಯ ಕಥೋಲಿಕ್ ಯುವ ಸಂಚಲನ ಘಟಕ, ಕಥೋಲಿಕ್ ಸಭಾ ಸಂಪಿಗೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ & ರೆಡ್ ಕ್ರಾಸ್ ಮಂಗಳೂರು ಇವುಗಳ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಸಂಪಿಗೆ ಚಚ್ ೯ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಸಂಪಿಗೆ ಹೋಲಿ ಸ್ಪಿರೀಟ್ ಚಚ್ ೯ನ ಧರ್ಮಗುರು ವಿನ್ಸೆಂಟ್ ಡಿ'ಸೋಜಾ ಅಧ್ಯಕ್ಷತೆಯನ್ನು ವಹಿಸಿ ಶಿಬಿರವನ್ನು ಉದ್ಘಾಟಿಸಿ ಇನ್ನೊಬ್ಬರ ಜೀವವನ್ನು ಉಳಿಸುವ ರಕ್ತವನ್ನು ದಾನ ಮಾಡುವುದು ಒಂದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗಭೂಷಣ್,ಚಚ್ ೯ ಚಚ್ ೯ನ ಕಥೋಲಿಕ್ ಸಭಾದ ಅಧ್ಯಕ್ಷ ರಿಚಾಡ್ ೯ ಖರ್ಡೋಜಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಮಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಭಾರತೀಯ ಕಥೋಲಿಕ್ ಯುವ ಸಂಚಲನದ ಸಚೇತಕ ವಿಪಿನ್ ಕುಮಾರ್ ಫೆರ್ನಾಂಡಿಸ್, ಅಧ್ಯಕ್ಷ ಜೋಯ್ಸನ್ ಅಬ್ರೆವೋ, ಮೂಡುಬಿದಿರೆ ವಲಯ ಕಥೋಲಿಕ್ ಯುವ ಸಂಚಲನದ ಅಧ್ಯಕ್ಷ ಬ್ರೆಂಡನ್ ಕುಟಿನ್ಹಾ ಈ ಸಂದರ್ಭದಲ್ಲಿದ್ದರು.
50 ಯುನಿಟ್ ರಕ್ತವನ್ನು ಸಂಗ್ರಹವಾಗಿದೆ
0 Comments