ಮಂಜೇಶ್ವರ ಗೋವಿಂದ ಪೈಗಳು ಭಾರತೀಯ ಶೇಷ್ಠ ಕವಿ: ಡಾ. ಪಾದೇಕಲ್ಲು ವಿಷ್ಣು ಭಟ್ಟ
ಮೂಡುಬಿದಿರೆ: ಮಂಜೇಶ್ವರ ಗೋವಿಂದ ಪೈಗಳು ಅನ್ಯ ಭಾಷೆಗಳನ್ನು ಪೋಷಿಸುವುದರ ಜತೆಗೆ ಕನ್ನಡ ಭಾಷೆಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನದ ಸಾಹಿತ್ಯ ಕೃಷಿಯನ್ನು ಮಾಡಿದ ಶೇಷ್ಠ ಭಾರತೀಯ ಕವಿ ಎಂದು ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ಟ ಹೇಳಿದರು.
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಸಾಂಸ್ಕೃತಿಕ ತಂಡದ ವತಿಯಿಂದ ಆಯೋಜಿಸಿದ್ದ 'ಕನ್ನಡಕ್ಕೆ ಗೋವಿಂದ ಪೈಗಳ ಕೊಡುಗೆ ' ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಇವರು ಕವಿಗಳು ಯಾವಾಗಲೂ ಸಮಾಜವು ಸಹೃದಯ, ಸುಸಂಸ್ಕೃತವಾಗಿರಬೇಕೆAದು ಬಯಸುತ್ತಾರೆ. ರಾಷ್ಟ್ರ ಕವಿ ಎಂ. ಗೋವಿಂದ ಪೈ ಯವರು ಕವಿತೆ, ಕಾವ್ಯ ರಚನೆ, ಭಾಷಾ ಸಂಶೋಧನೆ, ಸಾಹಿತ್ಯ ಸಂಶೋಧನಾ ವಿಷಯಗಳಲ್ಲಿ ಕೆಲಸ ಮಾಡಿದ್ದರು. ಸಂಶೋಧನೆಯಿAದ ಅನೇಕ ಕವಿಗಳ ಕಾಲ ನಿರ್ಣಯ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಮರಣದ ನಂತರ ಅವರ ಹಲವು ಕವಿತೆ ಮತ್ತು ನಾಟಕಗಳು ಪ್ರಕಟಗೊಂಡಿವೆ. ಕನ್ನಡ ಏಕೀಕರಣದ ಸಮಯದಲ್ಲಿ ಮಂಜೇಶ್ವರ ಪ್ರದೇಶ ಕೇರಳಕ್ಕೆ ಸೇರ್ಪಡೆಗೊಂಡದ್ದು ಗೋವಿಂದ ಪೈ ಅವರ ಘಾಸಿಗೊಳಿಸಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎ. ಐ. ಇ. ಟಿ ಅಕಾಡೆಮಿಕ್ ಡೀನ್ ಡಾ. ದಿವಾಕರ್ ಶೆಟ್ಟಿ ಮಾತನಾಡಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಪರಿಸರದ ಕುರಿತ ಸಂವೇದನೆಯನ್ನು ನಾವು ಎಂ. ಗೋವಿಂದ ಪೈ ಅವರ ಕೃತಿಯಲ್ಲಿ ಕಾಣಬಹುದು. ಗೋವಿಂದ ಪೈ ಅವರ ಕಾವ್ಯ ರಚನೆಯಲ್ಲಿ ಇದ್ದ ಮಹತ್ತರ ವಿಷಯಗಳನ್ನು ನಾವು ಮುಂದುವರೆಸಬೇಕಾಗಿದೆ. ಅದೇ ರೀತಿ ಕನ್ನಡ ನಾಡು ನುಡಿ, ನೆಲ ಜಲ, ಭಾಷೆಯನ್ನು ರಕ್ಷಿಸಿ ಬೆಳೆಸಬೇಕು ಎಂದರು.
ಕನ್ನಡ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎ.ಐ.ಇ.ಟಿ. ಡೀನ್ ಡಾ. ದುರ್ಗಾಪ್ರಸಾದ್ ಬಾಳಿಗ, ಉಪನ್ಯಾಸಕ ಮತ್ತು ಕನ್ನಡ ಸಂಘ ಸಂಯೋಜಕ ಗಣೇಶ್ ಎಂ.ಆರ್, ಉಪನ್ಯಾಸಕ ಮತ್ತು ಕನ್ನಡ ಸಂಘ ಸಂಯೋಜಕ ಡಾ.ಗುರುಶಾಂತ್ ಬಿ ವಗ್ಗರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗೌರಿಕ ನಿರೂಪಿಸಿದರು, ವಿದ್ಯಾರ್ಥಿನಿ ಪಲ್ಲವಿ ವಂದಿಸಿದರು
0 Comments