ಹಿರಿಯ ಫೋಟೋಗ್ರಾಫರ್ ಸುಬ್ಬು ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ಹಿರಿಯ ಫೋಟೋಗ್ರಾಫರ್ ಸುಬ್ಬು ನಿಧನ



ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ಮೂಡುಬಿದಿರೆಯಲ್ಲಿ ಫೊಟೊಗ್ರಾಫರ್ ಆಗಿ ಖ್ಯಾತರಾಗಿದ್ದ ಸುಬ್ಬು (55) ಅವರು ಇಂದು ಮುಂಜಾನೆ ನಿಧನರಾದರು.

  ಮೂಡುಬಿದಿರೆಯಲ್ಲಿ ಸುಷ್ಮಾ ಸ್ಟುಡಿಯೋ ಮೂಲಕ ಖ್ಯಾತರಾಗಿದ್ದ ಅವರು ಕೆಲ ಪತ್ರಿಕೆಗಳ ಛಾಯಾಗ್ರಾಹಕ ರಾಗಿಯೂ ಗಮನಸೆಳೆದಿದ್ದರು.   ಕೆಲ ಧಾರಾವಾಹಿ, ಚಿತ್ರಗಳಲ್ಲಿ ಸಹ ಕಲಾವಿದನಾಗಿಯೂ ಬಣ್ಣ ಹಚ್ಚಿದ್ದು ಓರ್ವ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು.

  ಸರ್ವರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದ ಸುಬ್ರಹ್ಮಣ್ಯ ಹೆಸರಿನ ಅವರು ಮೂಡುಬಿದಿರೆ ಪರಿಸರದಲ್ಲಿ ಸುಬ್ಬು ಎಂದೇ ಫೇಮಸ್ ಆಗಿದ್ದರು. ತಡರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿತ್ತಾದರೂ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Post a Comment

0 Comments