ಮೂಡುಬಿದಿರೆ ರೋಟರಿ ಅಧ್ಯಕ್ಷರಾಗಿ ಬಿ.ನಾಗರಾಜ್
ಮೂಡುಬಿದಿರೆ: ಇಲ್ಲಿನ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಬಿ.ನಾಗರಾಜ್ ಜುಲೈ 3ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಯದಶರ್ಿಯಾಗಿ ನಾಗರಾಜ ಹೆಗ್ಡೆ ಆಯ್ಕೆಯಾಗಿದ್ದಾರೆ. ನಿಶ್ಮಿತಾ ಟವರ್ಸ್ನ ಪ್ಯಾರಡೈಸ್ ಮಲ್ಟಿಪರ್ಪಸ್ ಹಾಲ್ನಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ರೋಟರಿಯ ಮಾಜಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಪದಗ್ರಹಣ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಎಸಿಸ್ಟೆಂಟ್ ಡಿಸ್ಟ್ರಿಕ್ಟ್ ಗವರ್ನರ್ ಡಾ. ರಮೇಶ್, ವಲಯ ಲೆಫ್ಟಿನೆಂಟ್ ಯಶವಂತ್ ಪಟವರ್ಧನ್ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷ ನಾಗರಾಜ್ ರೋಟರಿ ಕ್ಲಬ್ ಮೂಡುಬಿದಿರೆಯಲ್ಲಿ ರೋಟರಿ ಶಿಕ್ಷಣ ಸಂಸ್ಥೆಗಳು, ರೋಟಾಲೇಕ್ ಮೂಲಕ ಕೆರೆಗಳ ಪುನರುಜ್ಜೀವನ, ಅರ್ಹಫಲಾನುಭವಿಗಳಿಗಾಗಿ ರೋಟಾಲೆಟ್ ಯೋಜನೆಯಡಿ ಉಚಿತ ಶೌಚಾಲಯ ನಿಮರ್ಾಣ, ಬ್ಲಡ್ ಬ್ಯಾಂಕ್ ಸಹಿತ ಅರ್ಥಪೂರ್ಣ ಸೇವಾ ಚಟುವಟಿಕೆಗಳನ್ನು ನಡೆಸಿದೆ. ಕಳೆದ ರೋಟರಿ ವರ್ಷದಲ್ಲಿ ಡಯಾಲಿಸೀಸ್ ಕೇಂದ್ರವನ್ನೂ ತೆರೆದಿದೆ. ಈ ಬಾರಿಯೂ ಜಾಗತಿಕ ಅನುದಾನದಡಿ ಮೂಡುಬಿದಿರೆಯ ಪರಿಸರಕ್ಕೆ ಅಗತ್ಯವಿರುವ ಸೇವಾಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಭರವಸೆಯ ನಿಮರ್ಾಣದ ಪರಿಕಲ್ಪನೆಯಡಿ ಅಂಗನವಾಡಿ, ಪರಿಸರವನ್ನು ಮುಖ್ಯವಾಗಿಟ್ಟುಕೊಂಡು ಈ ಬಾರಿ ಚಟುವಟಿಕೆಗಳು ನಡೆಯಲಿವೆ ಎಂದರು.
0 Comments