ರಕ್ಷಿತ್ ಶಿವರಾಮ್ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಅಧ್ಯಕ್ಷರಿಗೆ ಎತ್ತಂಗಡಿ ಶಿಕ್ಷೆ:ಮತ್ತೆ ತಾರಕಕ್ಕೇರಿದ ಬೆಳ್ತಂಗಡಿ ಕಾಂಗ್ರೆಸ್ ಗೊಂದಲ

ಜಾಹೀರಾತು/Advertisment
ಜಾಹೀರಾತು/Advertisment


 ರಕ್ಷಿತ್ ಶಿವರಾಮ್ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಅಧ್ಯಕ್ಷರಿಗೆ ಎತ್ತಂಗಡಿ ಶಿಕ್ಷೆ:ಮತ್ತೆ ತಾರಕಕ್ಕೇರಿದ ಬೆಳ್ತಂಗಡಿ ಕಾಂಗ್ರೆಸ್ ಗೊಂದಲ


ಬೆಳ್ತಂಗಡಿ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ರವರು ಇತ್ತೀಚೆಗೆ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ವಿರುದ್ಧ ಧ್ವನಿ ಎತ್ತಿದ್ದರು.‌ ರಕ್ಷಿತ್ ಶಿವರಾಮ್ ಯಾರದ್ದೋ ಆಧಾರ್ ಕಾರ್ಡ್ ಇಟ್ಟುಕೊಂಡು ಏನೇನೋ ಮಾಡ್ತಾರೆ. ಯಾರದ್ದೋ ಫೋನ್ ನಂಬರ್‌ನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ತಮ್ಮ ವಿರೋಧಿಗಳ ವಿರುದ್ಧ ಮಾನಹಾನಿ ಮಾಡಿ ಬಿತ್ತರಿಸುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ದರು.


ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ರಕ್ಷಿತ್ ಶಿವರಾಮ್ ಅಧ್ಯಕ್ಷ ಸ್ಥಾನದಿಂದ ಶೈಲೇಶ್ ರವರನ್ನು ಎತ್ತಂಗಡಿ‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಮಾತ್ರವಲ್ಲದೆ ರಕ್ಷಿತ್ ಶಿವರಾಮ್ ವಿರೋಧಿ ಬಣದ ಮತ್ತೋರ್ವ ನಾಯಕ ರಂಜನ್ ಗೌಡರವರನ್ನೂ ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿದೆ.


ಶೈಲೇಶ್ ಸ್ಥಾನಕ್ಕೆ ಕಾಶಿಪಟ್ಣ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸತೀಶ್ ರವರನ್ನು ನೇಮಿಸಲಾಗಿದ್ದು ರಂಜನ್ ಗೌಡ ಸ್ಥಾನಕ್ಕೆ ನಾಗೇಶ ಗೌಡರವರನ್ನು ನೇಮಿಸಲಾಗಿದೆ.

Post a Comment

0 Comments