ಪುತ್ತಿಗೆ ಕಾಯರ್ ಪುಂಡ್ ನಲ್ಲಿ ಜಲಾವೃತ : ಎಚ್ಚೆತ್ತುಕೊಂಡ ಪಂಚಾಯತ್

ಜಾಹೀರಾತು/Advertisment
ಜಾಹೀರಾತು/Advertisment

 ಪುತ್ತಿಗೆ ಕಾಯರ್ ಪುಂಡ್ ನಲ್ಲಿ ಜಲಾವೃತ : ಎಚ್ಚೆತ್ತುಕೊಂಡ ಪಂಚಾಯತ್ 



  ಮೂಡುಬಿದಿರೆ : ಬುಧವಾರದಿಂದ ಸುರಿದ ಮನೆಯಿಂದಾಗಿ ತಾಲೂಕಿನ‌ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯರ್ ಪುಂಡ್ ನಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ತೋಟಕ್ಕೆ ನುಗ್ಗಿದೆ.  


 ಕಾಯರ್ ಪುಂಡ್ ಕಾಲನಿಯಲ್ಲಿ ಮಳೆಯ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯಲ್ಲಿ ತುಂಬಿಕೊಂಡು ತೋಟಗಳಲ್ಲಿ ತುಂಬಿಕೊಂಡಿತ್ತು. 

  ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ 

 ಪುತ್ತಿಗೆ ಪಂಚಾಯತ್ ತಕ್ಷಣ ಎಚ್ಚೆತ್ತುಕೊಂಡಿದೆ.

 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಜೆಸಿಬಿ ಮತ್ತು ಇಟಾಚಿ ಮೂಲಕ  ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಿ ಆಳ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು.

ನೀರು ಹರಿದು ಹೋಗುವ ರಭಸಕ್ಕೆ ಪ್ರಜ್ವಲ್ ಮಸ್ಕರೇನಸ್ ಅವರ ಹಳೆ ಮನೆಯ ಒಂದು ಭಾಗವು ಕುಸಿದು ಬಿದ್ದಿದೆ. ಇದಲ್ಲದೆ ಹಂಡೇಲು ಬಳಿ ಅಶ್ರಫ್ ಅವರ ಮನೆಯ ಹಿಂಭಾಗದ ಗುಡ್ಡವೂ ಕುಸಿದು ಬಿದ್ದಿದೆ. ಇಲ್ಲಿ ಪಂಚಾಯತ್ ಪಿಡಿಒ ಮತ್ತು ಗ್ರಾಮಕರಣಿಕರು ಭೇಟಿ ನೀಡಿದ್ದಾರೆ.

Post a Comment

0 Comments