ಉಡುಪಿಗೆ ಆಗಮಿಸಿದ ಸಾಲುಮರದ ತಿಮ್ಮಕ್ಕ: ನಾಳೆ ಐತಿಹಾಸಿಕ ಸಸ್ಯೋತ್ಸವದಲ್ಲಿ ಭಾಗಿ
ನಾಳೆ(ಜುಲೈ 23ನೇ ಆದಿತ್ಯವಾರ) ಉಡುಪಿಯ ರತ್ನ ಸಂಜೀವ ಕಲಾಮಂಡಲದ ಆವರಣದಲ್ಲಿ ನಡೆಯಲಿರುವ ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು ಮಣಿಪಾಲ, ಪರಿವಾರ್ ಚಾರಿಟೇಬಲ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಇದರ ಸಹಭಾಗಿತ್ವದಲ್ಲಿ "ಸಸ್ಯೋತ್ಸವ 2023" ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ರವರು ಉಡುಪಿಗೆ ಆಗಮಿಸಿದ್ದಾರೆ.
20,000ಕ್ಕೂ ಅಧಿಕ ಸಸ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ ಹಾಗೂ ಅದರಲ್ಲಿ ಅರಣ್ಯ ಮತ್ತು ಸಾಮಾನ್ಯ ಗಿಡಗಳೂ ಇರಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮತ್ತು ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್ ರವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸ್ನೇಹ ಸಂಗಮ ಸರಳೇಬೆಟ್ಟು ಇದರ ಅಧ್ಯಕ್ಷರಾದ ಗುರುರಾಜ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ವಿವಿಧ ಮಾಹಿತಿಯನ್ನು ನೀಡಿದ್ದರು.
0 Comments