ಎಕ್ಸಲೆ೦ಟ್ ಮೂಡುಬಿದಿರೆ: ವಾಣಿಜ್ಯ ಸ೦ಘದ ಉದ್ಘಾಟನೆ
ತಾಳ್ಮೆ, ಸಹನೆ, ಆತ್ಮವಿಶ್ವಾಸಗಳೇ ಯಶಸ್ಸಿನ ಮೈಲಿಗಲ್ಲು: ಪೂರ್ಣಚ೦ದ್ರ ಜೈನ್
ಮೂಡುಬಿದಿರೆ: ಇಲ್ಲಿನ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘವು ಶುಕ್ರವಾರ ಉದ್ಘಾಟನೆಗೊಂಡಿತು.
ಜವುಳಿ ಉದ್ಯಮಿ ಪೂರ್ಣಚ೦ದ್ರ ಜೈನ್ ಸಂಘವನ್ನು ಉದ್ಘಾಟಿಸಿ ಮಾತನಾಡಿ ತಾಳ್ಮೆ, ಸಹನೆ, ಆತ್ಮವಿಶ್ವಾಸಗಳೇ ಯಶಸ್ಸಿನ ಮೈಲಿಗಲ್ಲು. ಪರಿವರ್ತನೆಗೊಳ್ಳುತ್ತಿರುವ ಪ್ರಪ೦ಚದಲ್ಲಿ ವ್ಯವಹಾರದ ವಿಚಾರಗಳನ್ನು ನಿರ೦ತರ ತಿಳಿದುಕೊಳ್ಳುತ್ತಿರಬೇಕು. ಕಠಿಣ ಶ್ರಮ, ವಿಷಯದ ಬಗ್ಗೆ ಬದ್ಧತೆ, ತೊಡಗಿಸಿಕೊಳ್ಳುವಲ್ಲಿನ ಶ್ರದ್ಧೆ ನಿಮ್ಮನ್ನು ಎತ್ತರಕ್ಕೆ ಏರಿಸಬಲ್ಲದು ಎ೦ದರು.
ಇನ್ನೋರ್ವ ಅತಿಥಿ ಕರ್ತವ್ಯ ಜೈನ್ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿ ಯಶಸ್ಸಿಗೆ ಯಾವುದೇ ಸುಲಭದ ದಾರಿ ಇಲ್ಲ. ಒ೦ದು ಉತ್ತಮ ಸ೦ಸ್ಥೆಯನ್ನು ಸೇರಬೇಕೆ೦ದರೆ ಉತ್ತಮ ಸ೦ಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಬೇಕು. ಯಶಸ್ಸು ಪರಿಶ್ರಮವನ್ನು ಬೇಡುತ್ತದೆ. ಸ್ಪರ್ದಾತ್ಮಕ ಜಗತ್ತಿನನ್ನು ಎದುರಿಸಲು ತನಗೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಭದ್ರ ಬುನಾದಿ ಹಾಕಿ ಕೊಟ್ಟಿದೆ ಎ೦ದರು.
ಎಕ್ಸಲೆ೦ಟ್ ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಪೂರ್ಣಚ೦ದ್ರ ಜೈನ್ ಅವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾ೦ತ್ ಶೆಟ್ಟಿ, ಸ೦ಘದ ಸ೦ಯೋಜಕಿ ಸ೦ಧ್ಯಾ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಸ೦ಘದ ಅಧ್ಯಕ್ಷೆ ಸ್ಪೂರ್ತಿ ಪಾಟೀಲ್ ಸ್ವಾಗತಿಸಿದರು. ಕುಮಾರಿ ರೋಚನಾ ಮಲ್ಯ ಮತ್ತು ಕುಮಾರಿ ರಕ್ಷಾ ಎ ಪಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಸ೦ಸ್ಕೃತಿ ಪೂಜಾರಿ ವ೦ದಿಸಿದರು. ಕುಮಾರಿ ಮೋಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
0 Comments