ಸದನದಿಂದ ಹೊರಗಟ್ಟುವ ಕೆಲಸ ಬಿಜೆಪಿಯಿಂದಲೇ ಆರಂಭವಾದುದು: ಅಭಯಚಂದ್ರ ಜೈನ್ ಟೀಕೆ
ಮೂಡುಬಿದಿರೆ :ಅಸೆಂಬ್ಲಿಯಿಂದ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿರುವುದು ಕೂಡ ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುತ್ತಿರುವ ಬಿಜೆಪಿಯವರೇ ಇದನ್ನು ಆರಂಭಿಸಿದ್ದು ಎನ್ನುವುದನ್ನು ಮರೆಯಬಾರದು ಎಂದು ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಟೀಕಿಸಿದ್ದಾರೆ.
ಸದನದಲ್ಲಿ ಬುಧವಾರ ನಡೆದ ನಾಟಕೀಯ ಬೆಳವಣಿಗೆಗಳು ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಸಹಿತ ವಿಪಕ್ಷೀಯರು ಸಂಘಟಿತರಾಗಿ ಬಲವರ್ಧಿತ ಆಗುವುದನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ರಾಜ್ಯದಲ್ಲಿಯೂ ಕಾಂಗ್ರೆಸ್ ಬೆಳವಣಿಗೆಯನ್ನು ಸಹಿಸದ ಬಿಜೆಪಿಯವರು ಈಗ ಐಎಎಸ್ ಅಧಿಕಾರಿಗಳನ್ನು ವಿಪಕ್ಷದ ಸಭೆಗೆ ಬಂದ ಪ್ರಮುಖರನ್ನು ಸ್ವಾಗತಿಸಲು ಬಳಸಿಕೊಂಡ ದಕ್ಕಾಗಿ ಆಕ್ಷೇಪಿಸಿ ಅನಗತ್ಯ ಗಲಾಟೆ ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಐಎಎಸ್ ಅಧಿಕಾರಿಗಳನ್ನು
ಬಳಸಿಕೊಂಡಿದ್ದರು . ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ
ಗಣಿ ಹಗರಣ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಅಸೆಂಬ್ಲಿಯಲ್ಲಿ ಗದ್ದಲ ನಡೆದಿದ್ದ ಆ ದಿನಗಳಲ್ಲಿ
ಸ್ವತ: ಪೊಲೀಸ್ ಕಮಿಷನರ್ ಅವರನ್ನೇ ಸದನದ ಒಳಗೆ ಕರೆಸಿ ಪ್ರತಿಭಟನಾ ನಿರತ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು ಎನ್ನುವುದನ್ನು ಬಿಜೆಪಿಯವರು ಮರೆಯಬಾರದು ಎಂದು ಅಭಯಚಂದ್ರ ನೆನಪಿಸಿದ್ದಾರೆ.
ಇನ್ನೊಂದೆಡೆ ನೆಲೆ ಕಾಣಲು ಹವಣಿಸುತ್ತಿರುವ ಜಾತ್ಯತೀತ ಜನತಾ ದಳದ ಎಚ್ ಡಿ ಕುಮಾರಸ್ವಾಮಿ ಅವರು ದಿನಕ್ಕೊಂದು ಪಾರ್ಟಿ ಹಿಂದೆ ಸುತ್ತಾಡುತ್ತಿದ್ದಾರೆ ಈಗ ಅವರಿಗೆ ಬಿಜೆಪಿ ಭ್ರಷ್ಟಾಚಾರ ಪಕ್ಷ ಅಲ್ಲ ಎಂದು ಅವರು ಕಿಡಿಕಾರಿದರು.
0 Comments