ಮೂಡುಬಿದಿರೆಗೆ ಸರಕಾರಿ ಪಿ.ಯು.ಕಾಲೇಜು ಮಂಜೂರು ಮಾಡುವಂತೆ ಪದ್ಮಪ್ರಸಾದ್ ಜೈನ್ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಗೆ ಸರಕಾರಿ ಪಿ.ಯು.ಕಾಲೇಜು ಮಂಜೂರು ಮಾಡುವಂತೆ ಪದ್ಮಪ್ರಸಾದ್ ಜೈನ್ ಆಗ್ರಹ



ಮೂಡುಬಿದಿರೆಯಲ್ಲಿ ಅನೇಕ ಪ್ರತಿಷ್ಠಿತ ಖಾಸಗಿ ಪಿ.ಯು. ಕಾಲೇಜುಗಳಲ್ಲಿ ಸುಮಾರು 15,000/- ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿರುತ್ತಾರೆ. ಆದರೆ ಖಾಸಗೀ ಪಿ.ಯು, ಕಾಲೇಜಿನವರ ಆಡಳಿತ ಮಂಡಳಿಯ ಪ್ರಭಾವದಿಂದಾಗಿ ಮೂಡಬಿದಿರೆಯ ಪುರಸಭಾ ವ್ಯಾಪ್ತಿಯಲ್ಲಿ ಇಷ್ಟರವರೆಗೆ ಒಂದೇ ಒಂದು ಸರಕಾರಿ ಪಿ.ಯು. ಕಾಲೇಜು ಸ್ಥಾಪನೆ ಆಗಿರುವುದಿಲ್ಲ. ಇದರಿಂದಾಗಿ ಬಡ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುವಂತ್ತಾಗಿದೆ ಆದ್ದರಿಂದ ಪುರಸಭಾ ವ್ಯಾಪ್ತಿಯಲ್ಲಿ ಸರಕಾರಿ ಪಿ.ಯು.ಕಾಲೇಜನ್ನು ಮಂಜೂರು ಮಾಡುವಂತೆ ಸರಕಾರಿ ಸೌಲಭ್ಯಗಳ ಹಕ್ಕೋತ್ತಾಯ ವೇದಿಕೆಯ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮತ್ತು ಅದರ ಸುತ್ತಮುತ್ತಲ್ಲಿನ ಗ್ರಾಮದ ಪರಿಷಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳು ಖಾಸಗೀ ಶಾಲೆಗಳಲ್ಲಿ ಕಾಲೇಜು ಮತ್ತು ಪೀಸುಗಳನ್ನು ಪಾವತಿ ಮಾಡಲು ಅಸಾಧ್ಯವಾದುದರಿಂದ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಿಂದ ಮೊಟಕುಗೊಳಿಸಿರುತ್ತಾರೆ ಮತ್ತು ಅವರು ಕಾಲೇಜು ಶಿಕ್ಷಣದಿಂದ ವಂಚಿತರಾಗಿದ್ದಾರೆ,

ಮೂಡುಬಿದಿರೆಯಲ್ಲಿ ಸರಕಾರಿ ಹೈಸ್ಕೂಲ್ ಮತ್ತು ಮಂಗಳೂರು ಯುನಿವರ್ಸಿಟಿಯ ಸರಕಾರಿ ಪದವಿ ಕಾಲೇಜು ಇರುತ್ತದೆ.   ಬಡ ವಿಧ್ಯಾರ್ಥಿ ಗಳಿಗೆ ಸರಕಾರಿ ಪಿ.ಯು ಕಾಲೇಜು ಪ್ರಾರಂಭ ಮಾಡುವ ಮೂಲಕ ಅವರಿಗೆ ಕಾಲೇಜು ಶಿಕ್ಷಣವನ್ನು ಒದಗಿಸುವುದು ಸರಕಾರದ ಆಧ್ಯ ಕರ್ತವ್ಯವಾಗಿರುತ್ತದೆ.

ಆದ್ದರಿಂದ ಮೂಡುಬಿದಿರೆಯ ಸುತ್ತಮುತ್ತಲಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೂಡಲೇ ಮೂಡಬಿದಿರೆಯಲ್ಲಿ ಸರಕಾರಿ ಪಿ.ಯು. ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ

Post a Comment

0 Comments