ದಿ.ರತ್ನಾಕರ ದೇವಾಡಿಗ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ

ಜಾಹೀರಾತು/Advertisment
ಜಾಹೀರಾತು/Advertisment

 ದಿ.ರತ್ನಾಕರ ದೇವಾಡಿಗ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ



ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಕೆ.ಎಂ.ಸಿ ರಕ್ತನಿಧಿ ಕೇಂದ್ರ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂಸ್ಥೆಯ ಸದಸ್ಯ, ಪುರಸಭೆಯ ಮಾಜಿ ಅಧ್ಯಕ್ಷ ದಿ.ರತ್ನಾಕರ ದೇವಾಡಿಗ ಅವರ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.



 ರತ್ನಾಕರ ದೇವಾಡಿಗ ಅವರ ಪತ್ನಿ ಭಾರತಿ ರತ್ನಾಕರ ದೇವಾಡಿಗ ಅವರು ದೀಪ ಬೆಳಗಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಿದರು.

 ಕ್ಲಬ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್, ಕಾರ್ಯದರ್ಶಿ  ಸಂತೋಷ ಶೆಟ್ಟಿ , ರೋಟರಿ ಜಿಲ್ಲೆ 3181 ಝೋನ್ one ಜಿಲ್ಲಾ ಗವರ್ನರ್ ರೊ. ಪ್ರತಾಪ್ ಕುಮಾರ್ ಜೈನ್, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಕೆಎಂಸಿ ಟೀಮ್ ಹೆಡ್ ಜಿನ್ಸಿ, ಮೇಲ್ವೀಚಾರಕಿ ಶೆಲಿನ್ ಉಪಸ್ಥಿತರಿದ್ದರು. ಪ್ರಶಾಂತ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 ಯುವ ಕೃಷಿಕ ನಾಗರಾಜ್ ಅಂಬೂರಿ ಅವರು ಮೊದಲಿಗರಾಗಿ ರಕ್ತದಾನ ಮಾಡಿದರು.

Post a Comment

0 Comments