ತಹಸೀಲ್ದಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಮಂಗಳೂರು ಎಪಿಎಂಸಿ ಮಾಜಿ ಸದಸ್ಯರಿಂದ ಎಚ್ಚರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ತಹಸೀಲ್ದಾರ್ ವಿರುದ್ಧ ಮಾನನಷ್ಟ ಮೊಕದ್ದಮೆ

ಮಂಗಳೂರು ಎಪಿಎಂಸಿ ಮಾಜಿ ಸದಸ್ಯರಿಂದ ಎಚ್ಚರಿಕೆ



ಮೂಡುಬಿದಿರೆ: ಗ್ರಾಮಕರಣಿಕರ ವರ್ಗಾವಣೆ ವಿಚಾರವಾಗಿ ಇತ್ತೀಚೆಗಷ್ಟೇ ಹೋರಾಟ ನಡೆಸಿರುವ ನನಗೆ ಮೂಡುಬಿದಿರೆ ಪ್ರಥಮ ದರ್ಜೆ ತಹಸೀಲ್ದಾರ್ ವೈಯಕ್ತಿಕ ಧ್ವೇಷದಿಂದ ತೇಜೋವಧೆ ಮಾಡಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಸಾಮಾಜಿಕ ಹೋರಾಟಕ್ಕೆ ಪ್ರತಿಕಾರವಾಗಿ ವೈಯಕ್ತಿಕ ಧ್ವೇಷ ಸಾಧಿಸುತ್ತಿರುವ ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರು ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು  ಮಂಗಳೂರು ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. 


ಅವರು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಪುತ್ತಿಗೆ ಗ್ರಾಮದಲ್ಲಿ ಕಳೆದ 6 ತಿಂಗಳಲ್ಲಿ 5 ಮಂದಿ ಗ್ರಾಮಕರಣಿಕರನ್ನು ವರ್ಗಾಯಿಸಿರುವುದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವುದರ ವಿರುದ್ಧ ಗ್ರಾಮಸ್ಥರ ಜೊತೆಗೂಡಿ ಹೋರಾಟ ನಡೆಸಿದ್ದೇವೆ. ಇದನ್ನು ತಹಸೀಲ್ದಾರ್ ಧ್ವೇಷದ ರೂಪಕ್ಕೆ ಬಳಸಿದ್ದು, ನಾನು ಲೀಸ್ ನೀಡಿರುವ ಜಾಗದಲ್ಲಿರುವ ಕ್ವಾರಿಗಳಿಗೆ ಅನಾವಶ್ಯಕವಾಗಿ ದಾಳಿ ನಡೆಸಿ ಇರುಕುಳ ನೀಡುತ್ತಿದ್ದಾರೆ. ಗಣಿಗಾರಿಕೆ ಇಲಾಖೆಯರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ತಹಸೀಲ್ದಾರ್ ಆ ಬಳಿಕ ದಾಳಿ ನಡೆಸಿ, ಸಾರ್ವಜನಿಕ ವಲಯದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ತಹಸೀಲ್ದಾರ್ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಅಷ್ಟೇ ಅಲ್ಲದೆ ತಹಸೀಲ್ದಾರ್ ಕಚೇರಿಯಲ್ಲಿನ ಲಂಚಾವತರಗಳ ವಿರುದ್ಧ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.

Post a Comment

0 Comments