ನೀರ್ಕೆರೆ ಪ್ರೌಢಶಾಲೆಯಲ್ಲಿ
ಮೂಡುಬಿದಿರೆ: ಪತ್ರಿಕಾ "ದೀವಿಗೆ" ಮಾಸ ಪತ್ರಿಕೆ ಬಿಡುಗಡೆ
ಮೂಡುಬಿದಿರೆ : ಪತ್ರಿಕಾ ದಿನಾಚರಣೆಯ ದಿನವಾಗಿರುವ ಶನಿವಾರದಂದು ತಾಲೂಕಿನ ಸರ್ಕಾರಿ ಪ್ರೌಢಶಾಲೆ ನೀರ್ಕೆರೆಯಲ್ಲಿ "ದೀವಿಗೆ" ಎಂಬ ಶಾಲಾ ಮಾಸ ಪತ್ರಿಕೆ ಬಿಡುಗಡೆ ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಇವುಗಳ ಸಹಯೋಗದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ ವೈದ್ಯಕೀಯ ತಂಡದಿಂದ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.
ಶಾಸಕ ಉಮಾನಾಥ ಎ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ತೆಂಕ ಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು.
ಕಳೆದೆರಡು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿರುವ ಅಪ್ಪು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
"ಕ್ರೀಡಾರತ್ನ" ಪುರಸ್ಕೃತ ಕಂಬಳ ಓಟಗಾರ ಶ್ರೀನಿವಾಸ ಗೌಡ , ಲಯನ್ಸ್ ಕ್ಲಬ್ ನ ಅಧ್ಯಕ್ಷ ರೋಷನ್ ಡಿ'ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಂಚಾಯತ್ ಸದಸ್ಯರಾದ ಶಾಲಿನಿ, ವನಿತಾ, ದಿನೇಶ್ ಕುಮಾರ್ ಹಾಗೂ ನೀರ್ಕೆರೆ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ಉಪಾಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅನುಪಮ ಕಾರ್ಯಕ್ರಮ ನಿರೂಪಿಸಿದರು. ಸವಿತಾ ವಿಠಲ ಕೋಟ್ಯಾನ್ ಅವರು ವಂದಿಸಿದರು.
0 Comments