ಎಸ್ ಬಿ ಐನಿಂದ ಸ್ಪೂರ್ತಿ ಶಾಲೆಗೆ ಕಂಪ್ಯೂಟರ್ ಹಸ್ತಾಂತರ
ಮೂಡುಬಿದಿರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಸಿಎಸ್ ಆರ್ ಯೋಜನೆಯಲ್ಲಿ ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ವಿಶೇಷ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲು 10 ಕಂಪ್ಯೂಟರ್ ಗಳನ್ನು ಉಚಿತವಾಗಿ ನೀಡಿದ್ದು ಇದರ ಹಸ್ತಾಂತರ ಹಾಗೂ ಕಂಪ್ಯೂಟರ್ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಗುರುವಾರ ಸ್ಫೂರ್ತಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಚೀಫ್ ಜನರಲ್ ಮೆನೇಜರ್ ಗಿರಿಧರ್ ಕಿಣೆ ಇವರು ಕಂಪ್ಯೂಟರ್ ತರಬೇತಿ ತರಗತಿಯನ್ನು ಉದ್ಘಾಟಿಸಿ ಶಾಲೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಟೆಕ್ಣಿಕಲ್ ವಿಭಾಗದ ಡಿಪ್ಲೊವ್ ಡೋಂಗ್ರೆ, ಉಷ್ಠಿತರಿದ್ದರು. ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ವಿಶೇಷ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಮುತುವರ್ಜಿ ವಹಿಸಿ ಕಂಪ್ಯೂಟರ್ ನೀಡಿ ಸಹಕರಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಚೀಫ್ ಜನರಲ್ ಮೆನೇಜರ್ ಗಿರಿಧರ್ ಕಿಣಿ ಇವರಿಗೆ ವಿಶೇಷ ಮಕ್ಕಳು ತಯಾರಿಸಿದ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.
0 Comments