ವಿಶ್ವ ಪರಿಸರ ದಿನದ ಅಂಗವಾಗಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಸ್ಕೌಟ್ಸ್ ಮತ್ತು ಗೈಡ್ಸ್ ಇದರ ವರ್ಚುವಲ್ ಶಿಬಿರಾಗ್ನಿ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಪರಿಸರ ದಿನದ ಅಂಗವಾಗಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಸ್ಕೌಟ್ಸ್ ಮತ್ತು ಗೈಡ್ಸ್ ಇದರ ವರ್ಚುವಲ್ ಶಿಬಿರಾಗ್ನಿ ಕಾರ್ಯಕ್ರಮ



ಮೂಡುಬಿದಿರೆ: ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಭಾರತ್ ಸ್ಕೌಟ್ಸ್  ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡುಬಿದಿರೆ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವರ್ಚುವಲ್ ಶಿಬಿರಾಗ್ನಿ ಕಾರ್ಯಕ್ರಮವು  ನಡೆಯಿತು. 

ಸಂಸ್ಥೆಯ ಕಾರ್ಯದರ್ಶಿ ಅನಂತ ಕೃಷ್ಣರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಕೌಟ್ ಗೈಡ್ಸ್ ತರಬೇತಿಯ ಮಹತ್ವವನ್ನು ವಿವರಿಸಿದರು.  ಸ್ಕೌಟ್ಸ್ ಮತ್ತು ಗೈಡ್ಸ್ ಇದರ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಕಳೆದ ಸಲದ ತಮ್ಮ ಶಾಲಾ ಭೇಟಿಯನ್ನು ನೆನಪಿಸಿಕೊಂಡರು  ಹಾಗೂ ಶಿಕ್ಷಕರ ಶ್ರಮ ಮತ್ತು ಮಕ್ಕಳ ಅಭಿರುಚಿಯನ್ನು ಪ್ರಶಂಸಿಸಿದರು. ಹಾಗೂ ಕಾರ್ಯಕ್ರಮಗಳ ಪ್ರಾಮುಖ್ಯತೆಯನ್ನು ವಿವರಿಸಿದರು. 

ಸಂಸ್ಥೆಯ ಪ್ರವೀಣ್ ಚಂದ್ರ ಜೈನ್ ಇವರು  ಶಿಸ್ತಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಎ ಯಸ್ ಓ ಸಿ ಭರತ್ ರಾಜ್ ,   ಸ್ಥಳೀಯ ಸಂಸ್ಥೆಯ ಖಜಾಂಚಿ ಕೃಷ್ಣಮೂರ್ತಿ , ಜಿಲ್ಲಾ ಸಂಸ್ಥೆಯ ಗೈಡ್ಸ್ ಕಮಿಷನರ್ ಹಾಗೂ  ಸಹ ಕಾರ್ಯದರ್ಶಿ ಜಯವಂತಿ ಸೋನ್ಸ್ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು. ಸಂಸ್ಥೆಯ ಸಂಚಾಲಕ  ಮೋಹನ್ ಭಟ್ , ಗೈಡ್ಸ್ ಕಮಿಷನರ್ ಗೀತಾ ನಟರಾಜ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಅವರು ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು.  ಸಂಸ್ಥೆಯ ಸ್ಕೌಟ್ ಗೈಡ್ಸ್ ಅಧಿಕಾರಿ ಸಂಧ್ಯಾ ಶೆಣೈ ಇವರು ವಂದನಾರ್ಪಣೆಗೈದರು.

 ಹಿರಿಯ ಸಂಯೋಜಕ ಗಜಾನನ ಮರಾಠೆ , ಮ್ಯಾನೇಜರ್ ಸತೀಶ್ ಸ್ಕೌಟ್ಸ್ ಗೈಡ್ಸ್ ಶಿಕ್ಷಕರಾದ ಪ್ರೇಮಲತಾ ವಿನಯಾ, ಸುರಕ್ಷಾ,ಸುಕ್ಷಿತಾ, ಮಾಲತಿ , ಸುನೀತಾ, ನಿವೇದಿತಾ, ಇಂದಿರಾ, ಪ್ರೀತಿಕಾ , ಸುಪ್ರಿಯಾ, ಮೋಹನ್ ಹೊಸ್ಮಾರ್, ಡೀಲನ್, ಸುದೇಶ್, ರಾಜೇಶ್ ಇವರು ಉಪಸ್ಥಿತರಿದ್ದರು.. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಮತ್ತು ನೀರಿನ ಮಹತ್ವವನ್ನು ಸಾರುವ ಗಾಯನ ,ಭಾಷಣ , ಪ್ರಹಸನ ,  ನೃತ್ಯ ಕಾರ್ಯಕ್ರಮಗಳು ನಡೆದವು.


ಗೈಡ್ಸ್ ವಿದ್ಯಾರ್ಥಿನಿಯರಾದ ಅವನಿ , ಪ್ರಶ್ನಾ  ಮತ್ತು ಸಮನ್ವಿ ಕಾರ್ಯಕ್ರಮ ನಿರೂಪಿಸಿದರು..

Post a Comment

0 Comments