ನೇತಾಜಿ ಬ್ರಿಗೇಡ್ (ರಿ)ಮೂಡುಬಿದಿರೆ "* ಯುವ ಸಂಘಟನೆಯ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ನೋಟ್ಸ್ ಪುಸ್ತಕ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 *"ನೇತಾಜಿ  ಬ್ರಿಗೇಡ್ (ರಿ)ಮೂಡುಬಿದಿರೆ "* ಯುವ ಸಂಘಟನೆಯ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಕ್ಷಿಣಕನ್ನಡ  ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಹಾಗೂ ಲೇಬರ್ ಶಾಲೆ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀಮತಿ ದಿವ್ಯ ಜಗದೀಶ್ ವಹಿಸಿದ್ದರು. ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ನಾಗರಾಜ್ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀಮತಿ ನಾಗರತ್ನ ,SDMC ಅಧ್ಯಕ್ಷರಾದ ಶ್ರೀಮತಿ ಸುನೀತ ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪೋಲಿನ್ ಪಿಂಟೋ ,ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಉಪಸ್ಥಿತರಿದ್ದರು.ಶ್ರೀಮತಿ ಯೋಗಿತ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಕಸ್ತೂರಿ ಎಚ್ ವಂದಿಸಿದರು.ಶಿಕ್ಷಕರಾದ ಭವ್ಯ ,ಸುಪ್ರೀತ, ಶಾಲಾ ಮಕ್ಕಳು, ಪೋಷಕರು, ನೇತಾಜಿ ಬ್ರಿಗೇಡ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.




Post a Comment

0 Comments