ಹಿಂದುತ್ವ ಮತ್ತು ಬಿಜೆಪಿಯ ತಂತ್ರಗಾರಿಕೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಸೋಲು: ಅಭಯಚಂದ್ರ ಜೈನ್

ಜಾಹೀರಾತು/Advertisment
ಜಾಹೀರಾತು/Advertisment

 ಹಿಂದುತ್ವ ಮತ್ತು ಬಿಜೆಪಿಯ ತಂತ್ರಗಾರಿಕೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಸೋಲು: ಅಭಯಚಂದ್ರ ಜೈನ್ 



ಮೂಡುಬಿದಿರೆ: ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಒಪ್ಪಿಗೊಳ್ಳುತ್ತೇನೆ. ಕರಾವಳಿಯಲ್ಲಿ ಹಿಂದುತ್ವ ಅಲೆ ಇದೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಅತಿ ಹೆಚ್ಚಿನ ಲಾಭ ಮಾಡಿಕೊಟ್ಟಿದೆ. ಕಾಂಗ್ರೆಸ್ ಮಾಡಿದ ಎಲ್ಲಾ ಅಭಿವೃದ್ಧಿ ಯೋಚನೆಗಳು ಹಿಂದುತ್ವ ಮತ್ತು ಬಿಜೆಪಿಯವರು ದೇವರ ಫೋಟೋ ತೋರಿಸುವ ತಂತ್ರಗಾರಿಕೆಯಿಂದ ಮತಗಳಿಸುವಲ್ಲಿ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಬೇಸರ ವ್ಯಕ್ತಪಡಿಸಿದ್ದರು.


ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿಸಿದರು.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿರುವ ಮಿಥುನ್ ಎಂ. ರೈಯವರನ್ನು ಕಾಂಗ್ರೆಸ್ ಸರಕಾರದಲ್ಲಿ ವಿಧಾನಪರಿಷತ್ ಸ್ಥಾನ ನೀಡಿ ಕ್ಷೇತ್ರದ ಜನತೆಗೆ ಶಕ್ತಿ ತುಂಬುವ ಕಾರ್ಯವನ್ನು ಪಕ್ಷ ಮಾಡಬೇಕು ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್‌ರನ್ನು ಮಂತ್ರಿ ಸ್ಥಾನ ನೀಡಿ ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿಯನ್ನಾಗಿ ನಿಯುಕ್ತಿಗೊಳಿಸುವಂತೆ ಜೈನ್ ಆಗ್ರಹಿಸಿದರು.

ಮೋದಿ, ಯೋಗಿ ಅಲೆ ಅಥವಾ ಅಭಿವೃದ್ಧಿಯ ಹೆಸರಿನಲ್ಲಿ ಮತದಾರ ಮತ ಹಾಕಿಲ್ಲ ಎನ್ನುವುದಕ್ಕೆ ಕಳೆದ ಬಾರಿಕ್ಕಿಂತ 5019 ಮತ ಬಿಜೆಪಿಗೆ ಕಡಿಮೆ ಬಿದ್ದಿರುವುದು ಸಾಕ್ಷಿಯಾಗಿದ್ದು ಈ ಮೂಲಕ  ಡಬಲ್ ಇಂಜಿನ್ ಎರಡೂ ಸುಟ್ಟು ಹೋಗಿದೆ ಎಂದು ರಾಜ್ಯದ ಫಲಿತಾಂಶ ಸೂಚಿಸುತ್ತದೆ ಎಂದರು.

ಶಾಸಕ ಕೋಟ್ಯಾನ್ ಕ್ಷೇತ್ರದಲ್ಲಿ ವಾಸವಿರದೆ ಮಂಗಳೂರಿನಲ್ಲಿ ನೆಲೆಸಿದ್ದಾರೆ ಆದರೆ ನಾನು ಕಾರ್ಯಕರ್ತನಾಗಿ ನಿರಂತರ ಕ್ಷೇತ್ರದಲ್ಲಿ ವಾಸಿಸುತ್ತಿದ್ದೇನೆ.     

  ಅಭಿವೃದ್ಧಿ ಎನ್ನುವುದು ಅವರ ಅವರ ಹಿತಕ್ಕಾಗಿ ನಡೆಯಬಾರದು ಕ್ಷೇತ್ರದ ಅಭಿವೃದ್ಧಿ ಎಲ್ಲ ಜನತೆಗೆ ಅನುಕೂಲವಾಗಿದ್ದರೆ ನಾನು ಕೂಡ ಶಾಸಕರನ್ನು ಬಿಂಬಲಿಸುತ್ತೇನೆ ಎಂದು ಹೇಳಿದರು. 

ಕ್ಷೇತ್ರದಲ್ಲಿ ಮೂಡುಬಿದಿರೆ ಹೊಸ್ಮಾರು, ಬೆಳುವಾಯಿ ಅಳಿಯೂರು, ಮೂಡುಬಿದಿರೆ ಇರುವೈಲು, ಪುಚ್ಚಮೊಗರು ಹೊಸಬೆಟ್ಟು ರಸ್ತೆಗಳನ್ನು ನಾನು ಅಭಿವೃದ್ಧಿ ಪಡಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಳುವವನೇ ಹೊಲದೊಡೆಯ, ಆಶ್ರಯ ಮನೆ, ಇಂದಿರಾ ಆವಾಝ್, ಸಿಇಟಿ ಮುಂತಾದ ಯೋಜನೆಗಳ ಫಲಾನುಭವಿಗಳೇ ಇಂದು ಕಾಂಗ್ರೆಸನ್ನು ಸೋಲಿಸಿದ್ದಾರೆ ಎಂದು ಅಭಯಚಂದ್ರ ಬೇಸರ ವ್ಯಕ್ತಪಡಿಸಿದರು.

Post a Comment

0 Comments