ಮೂಡುಬಿದಿರೆ : 27 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಣೆ
ಮೂಡುಬಿದಿರೆ: ಶ್ರೀ.ಕ್ಷೇ.ಧರ್ಮಸ್ಥಳ ಯೋಜನೆಯಡಿ ವೃತ್ತಿಪರ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ನೀಡುತ್ತಿದ್ದು ಮೂಡುಬಿದಿರೆ ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ 27 ವಿದ್ಯಾರ್ಥಿಗಳಿಗೆ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಗುರುವಾರ ಆಲಂಗಾರು ಕಛೇರಿಯಲ್ಲಿ ವಿತರಿಸಲಾಯಿತು.
ತಾಲೂಕು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಆನಡ್ಕ ದಿನೇಶ್ ಕುಮಾರ್, ತಾಲೂಕು ಯೋಜನಾಧಿಕಾರಿ ಸುನೀತಾ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಲಂಗಾರು ಇದರ ಅಧ್ಯಕ್ಷ ದಯಾನಂದ ಪೈ ಮಂಜೂರಾತಿಪತ್ರವನ್ನು ವಿತರಿಸಿದರು.
ವಲಯ ಮೇಲ್ವೀಚಾರಕ ವಿಠಲ್, ಸೇವಾ ಪ್ರತಿನಿಧಿ ಉಷಾ ಕಿರಣ್, ವಿದ್ಯಾರ್ಥಿಗಳು ಮತ್ತು ಹೆತ್ತವರು ಈ ಸಂದರ್ಭದಲ್ಲಿದ್ದರು.
0 Comments