ಎಸ್‌ಎಸ್‌ಎಲ್‌ಸಿ
* ಎಕ್ಸಲೆಂಟ್ ಶಾಲೆಗೆ ಶೇ.100 ಫಲಿತಾಂಶ * ಶ್ರೇಯಾಂಕ್ ಮನೋಹರ್ ಪೈ ನಾಲ್ಕನೇ ಸ್ಥಾನ
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿ ಶ್ರೇಯಾಂಕ್ ಮನೋಹರ್ ಪೈ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಶ್ರೇಯಾಂಕ್ ಮನೋಹರ್ ಪೈ 622, ನಮೃತಾ ಕೆ. 620, ಯಶವಂತ್ 617 ಹಾಗೂ ಪ್ರಮುಖ್ ತುಳುಪುಳೆ 616 ಅಂಕವನ್ನು ಗಳಿಸಿ ಕ್ರಮವಾಗಿ ರಾಜ್ಯದಲ್ಲಿ ನಾಲ್ಕನೇ, ಆರನೇ, ಒಂಭತ್ತನೇ ಹಾಗೂ ಹತ್ತನೇ ಸ್ಥಾನ ಪಡೆದಿದ್ದಾರೆ.
ಯಶ್‌ವಂತ್ ಎಚ್.ಎ 614, ಭಾನುಶ್ರೀ ಎನ್. 612, ಅನಘಾ ಕಾಮತ್ 610, ಮೋಹಕ್ ಆರ್.ಗೌಡ 609, ಯಶಸ್.ಆರ್ 607, ಅಕ್ಷಯ್ ಎ. ಕಶ್ಯಪ್ 607, ಬಿ.ಎಸ್ ಶ್ರವಂತ್ 606, ಜೀವನ್ ಡಿ.ಎಸ್ 606, ಅದಿಥಿ ಕೆ. 605, ಯಶಸ್.ಎಂ 605, ಧನುಷ್ ಬಿ.ಗೌಡ 601 ಕ್ರಮವಾಗಿ ಅಂಕಗಳನ್ನು ಗಳಿಸಿದ್ದಾರೆ.
ಹಾಜರಾದ 113 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 42 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
0 Comments