ಭರತ್ ಶೆಟ್ಟಿ ಶಾಸಕರು, ನನ್ನ ಆತ್ಮೀಯರು, ಅವರ ಬಗ್ಗೆ ಗೌರವವಿದೆ:ತಪ್ಪು ಸಂದೇಶಗಳಿಗೆ ಮೂಡುಬಿದಿರೆ ಶಾಸಕರ ಸ್ಪಷ್ಟನೆ
ಕಳೆದ ಕೆಲವು ದಿನಗಳಿಂದ ಮಂಗಳೂರು ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಮೂಡುಬಿದಿರೆಯಲ್ಲಿ ರಾಜಕೀಯಕ್ಕೆ ಕೈ ಹಾಕಿ ಉಮನಾಥ್ ಕೋಟ್ಯಾನ್ ರವರ ಟಿಕೆಟ್ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬ ವಾಟ್ಸಾಪ್ ಸಂದೇಶಗಳಿಗೆ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಸ್ಪಷ್ಟನೆ ನೀಡಿದ್ದಾರೆ.
ನಮಸ್ಕಾರ,
ಕಳೆದ ಕೆಲವು ದಿನಗಳಿಂದ ಮಂಗಳೂರು ಉತ್ತರ ವಿಧಾಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ನನ್ನ ಮೂಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಸೀಟನ್ನು ತಪ್ಪಿಸಲು ಹುನ್ನಾರ ನಡೆಸಿದ್ದಾರೆ ಎಂಬ ಸುದ್ದಿ ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದೆ. ಈ ಮೂಲಕ ನಾನು ನಮ್ಮ ಕಾರ್ಯಕರ್ತರಿಗೆ, ಮುಖಂಡರುಗಳಿಗೆ ಹಾಗೂ ಜನರಿಗೆ ತಿಳಿಸಲಿಚ್ಚಿಸುವುದು ಏನೆಂದರೆ ನನ್ನ ಮನೆ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ಸನ್ಮಾನ್ಯ ಭರತ್ ಶೆಟ್ಟಿಯವರು ನನ್ನ ಶಾಸಕರೂ ಹೌದು, ನನ್ನ ಮತ್ತೆ ಅವರ ಮಧ್ಯೆ ಒಂದು ಆತ್ಮೀಯ ಸಂಬಂಧವಿದೆ. ಅವರ ತೇಜೋವಧೆ ಮಾಡಲು ಇಂತಹ ದುರುದ್ದೇಶಪೂರ್ವಕ ಕೆಲಸಗಳಿಗೆ ಕೆಲವರು ಕೈಹಾಕಿದ್ದಾರೆ ಹಾಗಾಗಿ, ಯಾರೂ,ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬಾರದು ಹಾಗೂ ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಳಿಕೊಳ್ಳುತ್ತೇನೆ.
ನಿಮ್ಮ,
ಉಮಾನಾಥ್ ಕೋಟ್ಯಾನ್
ಶಾಸಕರು, ಮೂಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರ
0 Comments