ಮೋಹನ್ ಹೊಸ್ಮಾರ್ ಅವರ ಕನ್ನಡ ಭಾವಗೀತೆಯ ಪೋಸ್ಟರ್ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಮೋಹನ್ ಹೊಸ್ಮಾರ್ ಅವರ ಕನ್ನಡ ಭಾವಗೀತೆಯ ಪೋಸ್ಟರ್ ಬಿಡುಗಡೆ.  



ಮೂಡುಬಿದಿರೆ: ಬಹುಮುಖ ಪ್ರತಿಭೆ ಮೋಹನ್ ಹೊಸ್ಮಾರ್ ಅವರ ಚೊಚ್ಚಲ `ಮನವೆಂಬ ಮಂಟಪ' ಸಾಹಿತ್ಯಕ ವಿಡಿಯೋ ಧ್ವನಿಮುದ್ರನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶನಿವಾರ  ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ  ನಡೆಯಿತು. 



ಮೋಹನ್ ಹೊಸ್ಮಾರ್ ಅವರ ಸಾಹಿತ್ಯವನ್ನು, ಶ್ವೇತಾ ಹೆಬ್ಬಾರ್ ಕಾಸರಗೋಡು ತಮ್ಮ ಕಂಠಸಿರಿಯಲ್ಲಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಗಜಾನನ ಮರಾಠೆ ಮಾಳ ರಾಗ ಸಂಯೋಜಿಸಿದ್ದು, ಅಶ್ವಿನ್ ಬಾಬಣ್ಣ ಅವರ ಸಂಗೀತ, ಸಂತೋಷ್ ಪುಚ್ಚೇರ್ ಅವರ ಸಂಕಲನದೊಂದಿಗೆ ಭಾವಗೀತೆ ಮೂಡಿಬಂದಿದೆ ಎಂದವರು ವಿವರಿಸಿದರು. ಭಕ್ತಿ ಭಾವಗಳ ಸಂಗಮ ಇದಾಗಿದ್ದು, ೬ನಿಮಿಷಗಳ ಅವಧಿಯನ್ನು ಒಳಗೊಂಡಿದೆ. ಏಪ್ರಿಲ್ ೩೦ರಂದದು ಯೂ ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ ಎಂದು ವಿವರಿಸಿದರು. 

ಕನ್ನಡ ಭಾವಗೀತೆಯ ಪೋಸ್ಟರ್ ಅನ್ನು ಪತ್ರಕರ್ತ ಹರೀಶ್ ಕೆ.ಆದೂರು ಅವರು ಬಿಡುಗಡೆಗೊಳಿಸಿದರು. ಪತ್ರಕರ್ತರಾದ ಪ್ರಸನ್ನ ಹೆಗ್ಡೆ, ನವೀನ್, ಪ್ರೇಮಶ್ರೀ ಕಲ್ಲಬೆಟ್ಟು ಈ ಸಂದರ್ಭದಲ್ಲಿದ್ದರು.

Post a Comment

0 Comments