ಮೂಡುಬಿದಿರೆಯ ಪ್ರಾಚೀನ ಕೆರೆಗೀಗ ಪುನರುತ್ಥಾನದ ಸಂಭ್ರಮ ಮರಳಿ ಅರಳುತಿದೆಯಿಲ್ಲಿ ದೊಡ್ಮನೆ ಚಂದ್ರಶೇಖರ ದೇವಳ ಕೆರೆ !

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯ ಪ್ರಾಚೀನ ಕೆರೆಗೀಗ ಪುನರುತ್ಥಾನದ ಸಂಭ್ರಮ

ಮರಳಿ ಅರಳುತಿದೆಯಿಲ್ಲಿ ದೊಡ್ಮನೆ ಚಂದ್ರಶೇಖರ ದೇವಳ ಕೆರೆ !



ಮೂಡುಬಿದಿರೆ: ಹದಿನೆಂಟು ಕೆರೆ, ಬಸದಿ,ದೇವಸ್ಥಾನಗಳು, ಕೇರಿಗಳು ಹೀಗೆ ಐತಿಹಾಸಿಕ ಮಹತ್ವವಿರುವ ಜೈನಕಾಶಿ, ಜ್ಞಾನಕಾಶಿ ಮೂಡುಬಿದಿರೆಯಲ್ಲಿ ಪ್ರಾಚೀನ ಕೆರೆಗಳದ್ದೇ ವಿಶೇಷತೆ. ಬೇಸಿಗೆಯ ತಾಪ ಏರಿದಂತೆಲ್ಲ ಜಲಸಂರಕ್ಷಣೆಯ ನೆನಪಾಗುವ ಇಂದಿನ ಪರಿಸ್ಥಿತಿಯಲ್ಲಿ ಮೂಡುಬಿದಿರೆಯ ಹಿರಿಯರು ಕೆರೆಗಳ ಮೂಲಕ ಕಟ್ಟಿಕೊಟ್ಟ ಪಾಠವನ್ನು ಇಲ್ಲಿನ ಪ್ರಜ್ಞಾವಂತರು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ಮಹತ್ವಪೂರ್ಣ. ಕರಾವಳಿಯ ಕಡಲು ದೂರವಿದ್ದರೂ ಇಲ್ಲಿ ಕಡಲಕೆರೆ ಎಂಬ ವಿಸ್ಮಯವಿದೆ. ಡಾ.ಸೋನ್ಸ್ ಅವರಂತಹ ಪರಿಸರಾಸಕ್ತರ ದೂರದಶರ್ಿತ್ವ ಇಂದು ಹಸಿರಮಡಿಲಾಗಿ ಅರಳಿದೆ. ಮೂಡುಬಿದಿರೆಯ ಕೆರೆಗಳ ಜತೆಗೆ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ನಿರಂತರ ಎಂಬಂತೆ ಇಲ್ಲಿ ನಡೆದಿದ್ದು ಇದೀಗ ಬಹುಕಾಲದ ಕಾಯುವಿಕೆಯ ಬಳಿಕ ಶತಮಾನಗಳಿಂದ ಗಿಡಗಂಟಿಪೊದೆಗಳಲ್ಲಿ ಮರೆಯಾಗಿ ಹೂಳು ತುಂಬಿಕೊಂಡಿದ್ದ ದೊಡ್ಮನೆ ಶ್ರೀ ಚಂದ್ರಶೇಖರ ದೇವಸ್ಥಾನದ ಸುಂದರ ಕೆರೆ ಜೀಣೋದ್ಧಾರಕ್ಕೆ ತೆರೆದುಕೊಂಡಿದೆ.



ಐತಿಹಾಸಿಕ ದೊಡ್ಮನೆ ಕೆರೆ:

ಇಲ್ಲಿನ ಪ್ರಾಂತ್ಯ ಗ್ರಾಮದ ದೊಡ್ಮನೆ ರಸ್ತೆ ಕೊನೆಯಲ್ಲಿರುವ ಶ್ರೀ ಚಂದ್ರಶೇಖರ ದೇವಸ್ಥಾನಕ್ಕೆ ಏಳೂವರೆ ಶತಮಾನಕ್ಕೂ ಮಿಕ್ಕಿದ ಇತಿಹಾಸವಿದೆ. ಈ ಪುರಾತನ ಶಿವಾಲಯ ಇಲ್ಲಿನ ಚೌಟರಸರ ಪ್ರಧಾನಿಗಳಾಗಿದ್ದ ದೊಡ್ಮನೆ ನರ್ಸಪ್ಪಯ್ಯ ಮನೆತನದವರ ಆರಾಧನಾ ಸನ್ನಿಧಿಯಾಗಿದೆ. ಆ ದಿನಗಳಲ್ಲಿ ಊರಿನ ಹದಿನೆಂಟು ಕೆರೆಗಳಲ್ಲಿ ಒಂದಾಗಿದ್ದ ಈ ದೊಡ್ಮನೆ ಕೆರೆಗೆ ಹೊಂದಿಕೊಂಡೇ ತೀರ್ಥ ಬಾವಿಯಾಗಿ ಇನ್ನೊಂದು ಪುಟ್ಟ ಕೆರೆಯಿರುವುದು ಲಿಂಗಾಯತ ಶೈಲಿಯ ಕೆರೆ ಇದು ಎನ್ನುವುದು ತಜ್ಞರ ಅಭಿಪ್ರಾಯ. ಅನತಿ ದೂರದಲ್ಲಿ ಕಾಲಗರ್ಭದಲ್ಲಿ ಧಾಮರ್ಿಕ ಇತಿಹಾಸವನ್ನೇ ಹುದುಗಿಸಿಕೊಂಡಿರುವ ಅಂಕಸಾಲೆಯ ಪರಿಸರದಲ್ಲೂ ಇಂತಹದ್ದೇ ಲಿಂಗಾಯತ ಶೈಲಿಯ ಮತ್ತೊಂದು ಕೆರೆಯಿತ್ತು ಎನ್ನುವುದಕ್ಕೆ ಕುರುಹುಗಳೂ ಇವೆ.  


ಶಿವಾಲಯದ ಮುಂಭಾಗದಲ್ಲಿ ಕೆರೆ ಸರೋವರಗಳಿರುವುದು ಸಾಮಾನ್ಯ. ಆದರೆ ಇಲ್ಲಿ ಕೆರೆ ದೇವಳದ ಹಿಂಭಾಗದಲ್ಲಿದೆ. ಇದರ ಈಶಾನ್ಯಕ್ಕಿರುವ ಕೆರೆಯ ಬಾವಿಯ ಪವಿತ್ರ ಜಲವೇ ಶಿವನ ಅಭಿಷೇಕಕ್ಕೆ ಮೀಸಲು. ರಾಷ್ಟ್ರಶಿಲ್ಪಿ ಖ್ಯಾತಿಯ ಶ್ಯಾಮಾಚಾರ್ ಅವರು ಕೆತ್ತಿದ ನಂದಿ, ದೇವಳದ ಹಿಂಭಾಗ 1962 ರಲ್ಲಿ ಅಷ್ಟಗ್ರಹ ಸಂಯೋಗದ ವಿಶಿಷ್ಠ ಸಂದರ್ಭದ ನೆನಪಲ್ಲಿ ಅರ್ಚಕರಾಗಿದ್ದ ರಾಮಪ್ಪಯ್ಯ ಅವರು  ನೆಟ್ಟ ಅಶ್ವತ್ಥಮರ, ಚರ್ಮರೋಗ, ಸಂತತಿ ಭಾಗ್ಯಕ್ಕೆ ಹೆಸರಾದ  ಸನ್ನಿಧಿಯಾಗಿರುವ ಈ ಅಪರೂಪದ ಶಿವಾಲಯ ಮರಳಿ ಅರಳಬೇಕು ಎನ್ನುವ ಹಿರಿಯಾಸೆ ಅವರದ್ದು.


ಜನಪ್ರತಿನಿಧಿಗಳನ್ನೂ ಗಣ್ಯರನ್ನೂ ಕೂಡಿಕೊಂಡ ಪುಷ್ಕರಿಣಿ ನವೀಕರಣ ಸಮಿತಿಯೂ ರಚನೆಯಾಗಿದೆ. ಜೀಣರ್ೋಧ್ದಾರ  ಕಾರ್ಯಕ್ಕೆ ಬೇಕಾಗುವ ಧನಸಂಚಯ ಭಕ್ತಾದಿಗಳಿಂದ ಶಿನಾನುಗ್ರಹದಿಂದ ಒದಗಿಬರಲಿದೆ ಎನ್ನುವ ವಿಶ್ವಾಸ ಕೆರೆ ಮಾತ್ರವಲ್ಲ ದೇವಳದ ಸಮಗ್ರ  ಅಭಿವೃದ್ಧಿಯ ಕನಸು ಹೊತ್ತಿರುವ ಅರ್ಚಕ ರತ್ನಾಕರ ಭಟ್  ಅವರದ್ದು.  


ಈಗಾಗಲೇ ರೋಟಾಲೇಕ್ ಅಭಿಯಾನದ ಮೂಲಕ  ಮೂಡುಬಿದಿರೆಯ ಪ್ರಾಚೀನ ಕೆರೆಗಳ ಜತೆಗೆ ಜಲಮೂಲಗಳನ್ನು ಮರಳಿ ಅರಳಿಸುವ ಮೂಲಕ ಗಮನ ಸೆಳೆದಿರುವ ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಜತೆಗೆ ಸ್ಥಳೀಯರ ಮುತುವಜರ್ಿಯಿಂದ ಇಲ್ಲಿ ಜಲಮೂಲಗಳ ಸಂರಕ್ಷಣೆಯ ಅಸಕ್ತಿ ಬತ್ತಿಲ್ಲ. ಇದೀಗ ಐತಿಹಾಸಿಕ ದೊಡ್ಮನೆ ಕೆರೆಯ ಅಭಿವೃದ್ಧಿಯ ಆಥರ್ಿಕ ಭಾರಕ್ಕೆ  ಊರ ಪರವೂರ ಭಕ್ತಾದಿಗಳು, ಪ್ರಜ್ಞಾವಂತರು, ಪರಿಸರಾಸಕ್ತರು ಖಂಡಿತಾ ಹೆಗಲು ನೀಡಿ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಕೆರೆ ಪುನರುತ್ಥಾನಕ್ಕೆ ಇಳಿದವರಲ್ಲಿದೆ.



1987ರಲ್ಲಿ ಇಲ್ಲಿನ ಶಿವ ಸನ್ನಿಧಿಯಲ್ಲಿಟ್ಟ ಅಷ್ಟಮಂಗಳ ಪ್ರಶ್ನೆಯಲ್ಲಿ ಈ ಪುಷ್ಕರಿಣಿಯ ಆಬಿವೃದ್ಧಿಯಾದಾಗ ಗ್ರಾಮ ಮಾತ್ರವಲ್ಲ ಊರಿಗೇ ಸಮೃದ್ಧಿ ಎಂದ್ದಿದ್ದರಂತೆ. ಕೊನೆಗೂ ಜೀಣರ್ಾವಸ್ಥೆಯಲ್ಲಿರುವ ಈ ಕೆರೆ ಅಭಿವೃದ್ಧಿ ಕಾಣುವಂತಾದದ್ದು ನನ್ನ ಪಾಲಿನ ಸುಯೋಗ -   ರತ್ನಾಕರ ಭಟ್.-ಕ್ಷೇತ್ರದ ಅನುವಂಶಿಕ ಅರ್ಚಕರು



ಚಿತ್ರ: ದೊಡ್ಮನೆ ಕೆರೆ / ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದು./ ಕೆರೆಗೆ ತಾಗಿಕೊಂಡಿರುವ ತೀರ್ಥ ಬಾವಿ, ರತ್ನಾಕರ ಭಟ್

Post a Comment

0 Comments