"ನಮ್ಮ ನಡೆ ಮತಗಟ್ಟೆಯ ಕಡೆ" ಬೃಹತ್ ಕಾಲ್ನಡಿಗೆ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 "ನಮ್ಮ ನಡೆ ಮತಗಟ್ಟೆಯ ಕಡೆ" ಬೃಹತ್ ಕಾಲ್ನಡಿಗೆ ಜಾಥಾ



ಮೂಡುಬಿದಿರೆ ತಾಲೂಕು ಆಡಳಿತ, ಪುರಸಭೆ ಮತ್ತು ಮೂಡುಬಿದಿರೆ ತಾಲೂಕು ಪಂಚಾಯತ್ ನಸಹಯೋಗದಲ್ಲಿ ವಿಧಾನಸಭಾ ಚುನಾವಣೆ-2023 ಅಂಗವಾಗಿ ಮತಗಟ್ಟೆಯ ಬಗ್ಗೆ ಅರಿವು ಮೂಡಿಸಲು "ನಮ್ಮ ನಡೆ ಮತಗಟ್ಟೆಯ ಕಡೆ"  ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ದ್ವಿಚಕ್ರ ವಾಹನ‌ ರ್ಯಾಲಿ  ಮೂಡುಬಿದಿರೆ ಆಡಳಿತ ಸೌಧ ಕಚೇರಿ ಮುಂಭಾಗದಿಂದ ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದ ವರೆಗೆ ಭಾನುವಾರ ನಡೆಯಿತು. 

ಮತದಾನ ಜಾಗೃತಿ ರಥವನ್ನು ಚುನಾವಣಾಧಿಕಾರಿ ಸಚ್ಚಿದಾನಂದ ಸತ್ಯಪ್ಪ ಕುಚನೂರ ಅವರು ಬಾವುಟ ಹಾರಿಸುವುದರ ಮೂಲಕ ಚಾಲನೆ‌ ನೀಡಿದರು.

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಯಕ್ಷಗಾನ ಕಲಾವಿದರು ಮತದಾನ ಜಾಗೃತಿ ಮೂಡಿಸುವ ಕಿರು ಪ್ರಹಸನದ‌ ಮೂಲಕ ಅಲ್ಲಿದ್ದ ಸ್ಥಳೀಯರಲ್ಲಿ ಮತದಾನದ ಅರಿವು ಮೂಡಿಸಿ ಗಮನ‌ ಸೆಳೆದರು. 

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ಎಂ., ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶಿವ ನಾಯ್ಕ್ , ತಾ.ಪಂ ಸಹಾಯಕ‌ ನಿರ್ದೇಶಕ ರಮೇಶ್ ರಾಥೋಡ್ ಪ್ರಭಾರ(ಗ್ರಾ.ಉ), ಪುರಸಭೆ ಪರಿಸರ ಅಭಿಯಂತರೆ ಶಿಲ್ಪಾ, ತಾ.ಪಂ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಎಂಬಿಕೆ, ಎಲ್ ಸಿ ಆರ್ ಪಿಗಳು, ಪುರಸಭೆ ಪೌರಕಾರ್ಮಿಕರು ಉಪಸ್ಥಿತರಿದ್ದರು.‌

ದ್ವಿಚಕ್ರ ವಾಹನಗಳಿಗೆ "ನಮ್ಮ‌ ನಡೆ ಮತದಾನದ ಕಡೆ" ಎಂಬ ಸ್ಟಿಕರ್ ಅಂಟಿಸ್ ರ್ಯಾಲಿ ನಡೆಸಲಾಯಿತು.

Post a Comment

0 Comments