ಮಂಗಳೂರು ಉತ್ತರಕ್ಕೆ ಭರತ್ ಶೆಟ್ಟಿಯೇ ಅಂತಿಮ:ಹಿಂದುತ್ವ-ಅಭಿವೃದ್ಧಿ ಎರಡರಲ್ಲೂ ಪಾಸ್ ಆದ ಶಾಸಕರು
ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಿಂದುತ್ವವೇ ಪ್ರಮುಖ ಮಾನದಂಡವಾಗಿರುತ್ತದೆ. ಹಿಂದುತ್ವವನ್ನು ಪಾಲಿಸಿ ಹಿಂದೂ ಕಾರ್ಯಕರ್ತರ ಕೈಯಲ್ಲಿ ಶಹಬ್ಬಾಷ್ ಅನ್ನಿಸಿಕೊಂಡರೆ ಆ ಅಭ್ಯರ್ಥಿ ಗೆದ್ದ ಹಾಗೆನೆ. ಇಂತಹಾ ಪರಿಸ್ಥಿತಿ ಇಂದು ಈ ಭಾಗದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಎದುರಾಗಿದ್ದು ಅದರಲ್ಲಿ ಮಂಗಳೂರು ಉತ್ತರ ಶಾಸಕಬಡಾ. ಭರತ್ ಶೆಟ್ಟಿಯವರು ಮೊದಲೇ ಪಾಸ್ ಆಗಿದ್ದಾರೆ.
ಮಂಗಳೂರು ಉತ್ತರದಲ್ಲಿ ಅಕ್ರಮವಾಗಿ ತಲೆಯೆತ್ತಿ ನಿಂತಿದ್ದ ಗೋಹತ್ಯೆ ಮಾಡುವ ಕಸಾಯಿಖಾನೆಯನ್ನು ನೆಲಸಮಗೊಳಿಸಿ ಉತ್ತರ ಪ್ರದೇಶದ ಯೋಗಿ ಮೋಡೆಲ್ ತಂದಿರುವ ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಒಂದು ಚಿಕ್ಕಮಗಳೂರು ಮತ್ತೊಂದು ಮಂಗಳೂರು ಉತ್ತರ. ಅಕ್ರಮ ಗೋವಧಾ ಶೆಡ್ಡ್‌ಗಳನ್ನು ನೆಲಸಮಗೊಳಿಸಿ ಹಿಂದೂ ಕಾರ್ಯಕರ್ತರಿಂದ ಮೆಚ್ಚುಗೆ ಪಡೆದ ಶಾಸಕರಾದರು. ಮಾತ್ರವಲ್ಲದೆ ಹಿಂದೂ ಕಾರ್ಯಕರ್ತರ ಯಾವುದೇ ಸಮಸ್ಯೆಗಳಿಗೆ ಧ್ವನಿಯಾಗಿ ಅವರನ್ನು ಭೇಟಿಯಾಗಿ ಸಹಕಾರ ನೀಡುತ್ತಿದ್ದರು. ಇದು ಶಾಸಕರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಅಭಿವೃದ್ಧಿಯಲ್ಲೂ ಶಾಸಕ ಭರತ್ ಶೆಟ್ಟಿ ಹಿಂದೆ ಬಿದ್ದಿಲ್ಲ. ಕ್ಷೇತ್ರದ ಹಲವಾರು ಪ್ರಥಮ ಕೊಡುಗೆಗಳಿಗೆ ಶಾಸಕರು ಸಾಕ್ಷಿಯಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ತನ್ನ ಕ್ಷೇತ್ರದಲ್ಲೂ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಲೋಕಾರ್ಪಣೆಗೊಂಡ ಕಾವೂರು ಕೆರೆ.
ಸದ್ಯ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಅದರ ಜೊತೆಗೆ ಹಿಂದುತ್ವವನ್ನು ಯಥಾವತ್ತಾಗಿ ಪಾಲಿಸುವ ಭರತ್ ಶೆಟ್ಟಿಯವರು ಉತ್ತರ ವಿಧಾನಸಭಾ ಕ್ಷೇತ್ರದ ಅಂತಿಮ ಅಭ್ಯರ್ಥಿಯಾಗಿದ್ದಾರೆ. ಇತ್ತೀಚೆಗೆ ನಡೆದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಭರತ್ ಶೆಟ್ಟಿ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
0 Comments