ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗೆ ಶಿಲಾನ್ಯಾಸ



ಮೂಡುಬಿದಿರೆ: ತಾಲೂಕಿನ ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆಗೆ ರೂ. 16.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾದ ನೂತನ ಕೊಠಡಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಶನಿವಾರ  ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಈ ಬಾರಿ ಕ್ಷೇತ್ರದಲ್ಲಿರುವ ಶಾಲೆಗಳಿಗೆ 35 ಕೊಠಡಿ ಹಾಗೂ ಪಿಯು ಕಾಲೇಜಿನ 7 ಕೊಠಡಿಗಳನ್ನು ಮಂಜೂರುಗೊಳಿಸಲಾಗಿದೆ.

ಅಳಿಯೂರಿಗೆ ಬಹುಬೇಡಿಕೆಯಾದ ಪಿಯು ಕಾಲೇಜು ಈ ವರ್ಷದಿಂದ ಪ್ರಾರಂಭಿಸಲಾಗಿದ್ದು ಮುಂಬರುವ ವರ್ಷದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಕೂಡ ಪ್ರಾರಂಭಿಸಲಾಗುವುದು ಎಂದರು.

ಕ್ಷೇತ್ರ ಶೀಕ್ಷಣಾಧಿಕಾರಿ ಗಣೇಶ್ ವೈ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್ ಅಂಚನ್, ಶಿರ್ತಾಡಿ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಲತಾ ಹೆಗ್ಡೆ, ಸಂತೋಷ್ ಶೆಟ್ಟಿ, ಮಾಜಿ. ತಾ.ಪಂ. ಸದಸ್ಯೆ ನಾಗವೇಣಿ, ಗುತ್ತಿಗೆದಾರ ಸುಕೇಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಈ ಸಂದರ್ಭದಲ್ಲಿದ್ದರು.

Post a Comment

0 Comments