ಪುರಸಭೆ ಮತ್ತು ರೋಟರಿ ಕ್ಲಬ್ ನ ವಿನೂತನ ಕಾರ್ಯಕ್ರಮ.. ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment

 ಪುರಸಭೆ ಮತ್ತು ರೋಟರಿ ಕ್ಲಬ್ ನ ವಿನೂತನ ಕಾರ್ಯಕ್ರಮ..

ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ: ಮನವಿ



ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿರುವ ಅಂಗನವಾಡಿ ಮಕ್ಕಳಿಂದ ಆರಂಭಿಸಿ 7 ನೇ ತರಗತಿ ವರೆಗಿನ ಮಕ್ಕಳಿಗೆ ಮಕ್ಕಳಿಗೆ ಜೀವನ ಕೌಶಲ್ಯ ನಿಯಮಗಳ ಬಗ್ಗೆ ವಾರದಲ್ಲಿ 2 ತರಗತಿಯ ಅವಧಿಯಲ್ಲಿ ತರಬೇತಿ ನಡೆಸುವ ಬಗ್ಗೆ ಶಿಕ್ಷಣ ಶಿಲಾಖೆಯಿಂದ ಸಂಪೂರ್ಣ ಸಹಕಾರ ನೀಡುವಂತೆ ಕೋರಿ ಮೂಡುಬಿದಿರೆ ಪುರಸಭೆ  ಮತ್ತು ರೋಟರಿ ಕ್ಲಬ್ ವತಿಯಿಂದ ಶಿಕ್ಷಣಾಧಿಕಾರಿ ಗಣೇಶ್ ವೈ ಅವರಿಗೆ ಮನವಿ ನೀಡಲಾಯಿತು.

 ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಮಾಧ್ಯಮದೊಂದಿಗೆ ಮಾತನಾಡಿ ರೋಟರಿ ಕ್ಲಬ್ ಮತ್ತು ಮೂಡುಬಿದಿರೆ ಪುರಸಭೆ  ಮಕ್ಕಳಿಗೆ ಜೀವನ ಕೌಶಲ್ಯ ಕಲಿಸುವಂತಹ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ರಮಕ್ಕೆ ಬಹಳಷ್ಟು ಶ್ರಮ‌ವಹಿಸಬೇಕಾಗಿದೆ.ಎಲ್ಲರ ಸಹಕಾರನೂ ಬೇಕಿದೆ.ಮುಂದಿನ ದಿನಗಳಲ್ಲಿ ರೋಟರಿ ಕ್ಲಬ್ ಸೇರಿದಂತೆ ಬೇರೆ ಬೇರೆ ಸಂಘ-ಸಂಸ್ಥೆಗಳನ್ನು ಜೊತೆಯಾಗಿಸಿಕೊಂಡು ಮೂಡುಬಿದಿರೆ ವ್ಯಾಪ್ತಿಯಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಮೈನ್ ಶಾಲೆ, ಪ್ರಾಂತ್ಯ, ಸೈಂಟ್ ಥೋಮಸ್, ಡಿ.ಜೆ, ಅಳಿಯೂರು ಸೇರಿದಂತೆ ಇನ್ನಿತರ ಶಾಲೆಗಳ ಮಕ್ಕಳ ಜೀವನಕ್ಕೆ ಬೇಕಾಗಿರುವ ಕೌಶಲ್ಯಗಳನ್ನು ಕಲಿಸಿ ಮುಂದಿನ‌ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಜೀವನ ಕೌಶಲ್ಯವನ್ನು ಕಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು. 

ಹಿರಿಯರನ್ನು ಗೌರವಿಸುವ ಗುಣ, ಸ್ವ ನೈರ್ಮಲ್ಯ ಹಾಗೂ ಸ್ವಚ್ಛ ಪರಿಸರ, ಸಾರಿಗೆ ನಿಯಮಗಳ ಪಾಲನೆ, ಉಳಿತಾಯ ಮಾಡುವ ಗುಣ, ಒಳ್ಳೆಯ ನಡವಳಿಕೆ, ಸಮಯದ ಮೌಲ್ಯ, ಆರೋಗ್ಯವೇ ಭಾಗ್ಯ, ಪ್ರಕೃತಿ ಪ್ರೇಮ, ಆಟೋಟಗಳಲ್ಲಿ ಭಾಗವಹಿಸುವಿಕೆ, ಪರೋಪಕಾರ ಮತ್ತು ಹಂಚಿಕೆ ಮನೋಭಾವ ಮತ್ತು ನಮ್ಮ ಸಂಸ್ಕೃತಿಯ  ತರಬೇತಿಯನ್ನು ನೀಡಲಾಗುತ್ತದೆ.

 ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರೀಫ್,  ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ.ಎಂ, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷ ಡಾ.ಮುರಳಿಕೃಷ್ಣ, ರೋಟರಿ ಕ್ಲಬ್ ನ ಸದಸ್ಯ ಜಯರಾಮ್ ಕೋಟ್ಯಾನ್, ರೋಟರಿ ಕ್ಲಬ್ ನ ಮುಂದಿನ ಸಾಲಿನ ಅಧ್ಯಕ್ಷ ನಾಗರಾಜ ಪಿ.,ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಈ ಸಂದರ್ಭದಲ್ಲಿದ್ದರು.

Post a Comment

0 Comments