ಇರುವೈಲು ಗ್ರಾಮಸಭೆ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಶಿಕ್ಷಕಿಯ ಅಳಲು

ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲು ಗ್ರಾಮಸಭೆ

ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಶಿಕ್ಷಕಿಯ ಅಳಲು



ಮೂಡುಬಿದಿರೆ:  ಪೂಪಾಡಿಕಲ್ಲು ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.  ಶಾಲೆಯ ಕೊಳವೆಬಾವಿ ಕೆಟ್ಟಿದೆ ಅದನ್ನು ಸರಿಪಡಿಸಲು 10-15ಸಾವಿರ ಖರ್ಚು ಹೆಚ್ಚಾಗಿದೆ. ಪಂಚಾಯತ್ ನಿಂದ ದಿನಕ್ಕೆ ಒಂದು ಗಂಟೆ ನೀರು ಬಂದರೂ ಸಾಕಾಗುವುದಿಲ್ಲ ಎಂದು ಪೂಪಾಡಿಕಲ್ಲು  ಶಾಲಾ ಮುಖ್ಯ ಶಿಕ್ಷಕಿ ಸೋಫಿಯ ಗ್ರಾಮಸಭೆಯಲ್ಲಿ ಅಳಲನ್ನು ತೋಡಿಕೊಂಡರು.

ಅವರು ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಇರುವೈಲು ಗ್ರಾಮ‌‌ ಪಂಚಾಯತ್ ನ 2022-23 ನೇ‌‌ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದರು.

    ಇದಕ್ಕೆ ಉತ್ತರಿಸಿದ ಪಂಚಾಯತ್ ಅಧ್ಯಕ್ಷ ಪಂಚಾಯತ್ ನಲ್ಲಿ ಅನುದಾನ ಇಲ್ಲದಿರುವುದರಿಂದ ಜಿಲ್ಲಾ ಪಂಚಾಯತ್ ಗೆ ಮನವಿಯನ್ನು ನೀಡುವಂತೆ ತಿಳಿಸಿದರು.

 ಇರುವೈಲಿನಲ್ಲಿ 101 ಸರ್ವೇ ನಂಬರಿನಲ್ಲಿ 442 ಎಕ್ರೆ ಡೀಮ್ಡ್ ಫಾರೆಸ್ಟ್ ಇದೆ. ಅದರಲ್ಲಿ ಶೇಕಡಾ 15%ರಷ್ಟು ಡೀಮ್ಡ್ ಹೋಗಿದೆ. ಇನ್ನು  ಡೀಮ್ಡ್ ಪಟ್ಟಿಯಲ್ಲಿರುವ ಜಾಗವನ್ನು ತೆಗೆದರೆ ನಿವೇಶನವಿಲ್ಲದವರಿಗೆ , ಮನೆ ಕಟ್ಟಿ ಕುಳಿತು ಇದುವರೆಗೂ ಹಕ್ಕುಪತ್ರ ಸಿಗದೇ ಇರುವವರಿಗೆ , ಡೀಮ್ಡ್ ಪಟ್ಟಿಯಿಂದ ಕೈಬಿಟ್ಟರೆ ಅದನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಪಂಚಾಯತ್ ಪ್ರಯತ್ನ ಪಡುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.


ಗ್ರಾಮಸ್ಥ ರವಿ ಮರ್ತಲೆ ಮಾತನಾಡಿ ತಮಗೆ ವಿದ್ಯುತ್ ಬಿಲ್ಲು 17,000 ಬಂದಿದ್ದು ಇಷ್ಟೊಂದು ದೊಡ್ಡ ಬಿಲ್ಲು ಹೇಗೆ ಬಂದಿದೆ? ಈಗಾಗಲೇ 3000ಪಾವತಿಸಿದರೂ ಮತ್ತೆ 3800ಬಿಲ್ಲು ಬಂದಿದೆ ಇದರ ಕುರಿತು ವಿಮರ್ಶಿಸಬೇಕೆಂದರು.

ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಕಛೇರಿಗೆ ಬಿಲ್ಲನ್ನು ನೀಡಿ ಅದನ್ನು ವಿಚಾರಣೆ ಮಾಡಲಾಗುವುದು ಎಂದರು.

ಜಮಾಬಂದಿ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ವಹಿಸಿದ್ದರು.

ನೋಡಲ್ ಅಧಿಕಾರಿಯಾಗಿ ನಿತ್ಯಾನಂದ ಶೆಟ್ಟಿ ಭಾಗವಹಿಸಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಸುನೀತಾ,  ಪಂಚಾಯತ್ ಸದಸ್ಯರುಗಳಾದ ಜಯಶಂಕರ್, ಪ್ರವೀಣ್ ಶೆಟ್ಟಿ, ಅಬ್ದುಲ್ ರಜಾಕ್, ನವ್ಯ, ಉಷಾ, ಕುಸುಮ, ರುಕ್ಮಿಣಿ, ನಾಗೇಶ್ ಅಮೀನ್, ನವೀನ್ ಪೂಜಾರಿ, ಮಲ್ಲಿಕಾ, ಅಶ್ರಫ್, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಐಇಸಿ ಸಂಯೋಜಕಿ ಅನ್ವಯ, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments