ಬಂಟ ಬಿಲ್ಲವರು ಒಂದಾಗಿ-ಖಾದರನ್ನು ಸೋಲಿಸಿ-ಭರತ್ ಶೆಟ್ಟಿ ಕರೆ
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಬಂಟ ಬಿಲ್ಲವರು ಒಂದಾಗಬೇಕಿದೆ. ಇಲ್ಲಿ ಕೋಮುವಾದಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರು ಎಲ್ಲಾ ದೇವಸ್ಥಾನಗಳಿಗೆ ಹೋಗಿ ನಮಸ್ಕಾರ ಮಾಡುತ್ತಾರೆ ಎಂದು ನಮ್ಮವರು ಓಟು ಹಾಕುತ್ತಾರೆ. ಆದರೆ ಅದರ ಹಿಂದಿನ ಮರ್ಮ ನಮ್ಮ ಮುಗ್ದ ಜನತೆಗೆ ಅರ್ಥ ಆಗುತ್ತಿಲ್ಲ. ಇಂತಹಾ ಶಾಸಕರನ್ನು ಸೋಲಿಸಬೇಕಾದರೆ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಬಂಟ ಬಿಲ್ಲವರು ಒಂದಾಗಬೇಕಿದೆ ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಭರತ್ ಶೆಟ್ಟಿ ಹೇಳಿದರು.
ಮಂಗಳೂರಿನಲ್ಲಿ ನಡೆದ ಹಿಂದೂ ಸಂಘಟನೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಮಾತನ್ನು ಹೇಳಿದ್ದಾರೆ. ಇಲ್ಲಿ ಬಂಟ ಬಿಲ್ಲವರು ಸರಿಯಿಲ್ಲ ಎಂಬ ಆರೋಪವಿದೆ. ಇದು ಒಳ್ಳೆಯದಲ್ಲ. ಕಡಲಾಯೆ, ಮಡಲಾಯೆ, ಒಕ್ಕೆಲಾಯೆ, ಉಡಲಾಯೆ ಎಲ್ಲರೂ ಒಂದೇ ತಾಯಿಯ ಮಕ್ಕಳು. ನಾವೆಲ್ಲರೂ ಸೇರಿ ಮತಾಂಧ ಶಾಸಕರನ್ನು ಸೋಲಿಸಬೇಕು ಎಂದು ಕರೆ ನೀಡಿದರು.
0 Comments