ಹಿಂದೂ ರಾಷ್ಟದ ಸ್ಥಾಪನೆಗಾಗಿ ಕಾರ್ಕಳದಲ್ಲಿ ಪ್ರಜ್ವಲನೆಯ ಮೂಲಕ ಹಿಂದೂ ರಾಷ್ಟ ಜಾಗೃತಿ ಸಭೆಯ ಶುಭಾರಂಭ !

ಜಾಹೀರಾತು/Advertisment
ಜಾಹೀರಾತು/Advertisment



ಹಿಂದೂ ರಾಷ್ಟದ ಸ್ಥಾಪನೆಗಾಗಿ ಕಾರ್ಕಳದಲ್ಲಿ ಹಿಂದೂ ರಾಷ್ಟ ಜಾಗೃತಿ ಸಭೆಯ ಆಯೋಜನೆ !



ದೀಪ ಪ್ರಜ್ವಲನೆಯ ಮೂಲಕ ಹಿಂದೂ ರಾಷ್ಟ ಜಾಗೃತಿ ಸಭೆಯ ಶುಭಾರಂಭ !


*ಕಾರ್ಕಳ* : ದಿನಾಂಕ 19-03-2023, ಭಾನುವಾರ ಸಾಯಂಕಾಲ 4:30 ಘಂಟೆಗೆ ಕಾರ್ಕಳದ ಶ್ರೀ ವೀರಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ ಜಾಗೃತಿ ಸಭೆಯ ಆಯೋಜನೆಯನ್ನು ಮಾಡಲಾಗಿತ್ತು. ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದ ಮಂತ್ರ ಘೋಷದೊಂದಿಗೆ ಕಾರ್ಯಕ್ರಮದ ಶುಭಾರಂಭ ಮಾಡಲಾಯಿತು.


ಈ ಸಭೆಯ ವಕ್ತಾರರಾಗಿ ಅಜೆಕಾರಿನ ಶ್ರೀ. ನಂದಕುಮಾರ್ ಹೆಗ್ಡೆ, ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಸುಮಾರು 150 ಜನರು ಉಪಸ್ಥಿತರಿದ್ದರು.


ಹಿಂದೂ ಜನ ಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ 2025 ಕ್ಕೂ ಅಧಿಕ ಸಭೆಯನ್ನು ಭಾರತದಾದ್ಯಂತ ನಡೆಸಿದೆ. ಈ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳ ಉದ್ದೇಶವು ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಲು ಹಿಂದೂಗಳು, ಹಿಂದೂ ಸಂಘಟನೆಗಳು ಮತ್ತು ವಿವಿಧ ಪಂಗಡಗಳನ್ನು ಒಗ್ಗೂಡಿಸುವುದು ಆಗಿದೆ. ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳು ಹಿಂದೂಗಳು ಮತ್ತು ಹಿಂದೂ ಧರ್ಮದ ಮೇಲೆ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಲ್ಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡಾ ಆಗಿದೆ.


Post a Comment

0 Comments