ಮೂಡುಬಿದಿರೆ : ನೀರ್ಕೆರೆಯಲ್ಲಿ ಕುಡುಬಿ ಜನಾಂಗದಿಂದ ಹೋಳಿ ಉತ್ಸವ
ಮೂಡುಬಿದಿರೆ: ತಾಲೂಕಿನ ರಾಧಾಕೃಷ್ಣ ಭಜನಾ ಮಂದಿರ ನೀರ್ಕೆರೆ ಪೂಮಾವಾರ ಇಲ್ಲಿ ಶುಕ್ರವಾರ ರಾತ್ರಿ ಹೋಳಿ ಉತ್ಸವ ನಡೆಯಿತು.
ಹೋಳಿ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಕರಾವಳಿಯಲ್ಲಿ ಕೃಷಿಯನ್ನೇ ತಮ್ಮ ಬದುಕನ್ನಾಗಿಸಿ, ಮೂಲತಃ ಗೋವಾ ವಲಸಿಗರಾಗಿರುವ ಕೊಂಕಣಿ ಭಾಷೆಕ ಕುಡುಬಿ ಸಮುದಾಯಕ್ಕೆ ಹೋಳಿ ಹಬ್ಬವು ಶಿವರಾತ್ರಿಯಿಂದ ಯುಗಾದಿಯವರೆಗೆ ತಮ್ಮ ತಮ್ಮ ಕೂಡುಕಟ್ಟುಗಳಲ್ಲಿ ಆಚರಿಸುವ ಒಂದು ವಿಶಿಷ್ಟ ಸಂಪ್ರದಾಯ ಸಂಸ್ಕೃತಿಯ ಹಬ್ಬ ಹೋಳಿ ಹಬ್ಬದ ಸಂಭ್ರಮ.., ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶಿವರಾತ್ರಿ ನಂತರ ಪ್ರಾರಂಭವಾಗಿ ಹೋಳಿ ಹುಣ್ಣಿಮೆಯಂದು ಮುಕ್ತಾಯವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆಯಂದು ಪ್ರಾರಂಭವಾಗಿ ಹೊಸವರುಷದ ಯುಗಾದಿ ಹಬ್ಬದಂದು ಮುಕ್ತಾಯ ವಾಗುವುದು ರೂಢಿ.., ದೇಶಾದ್ಯಂತ ಹೋಳಿ ಹಬ್ಬವನ್ನು ಬಣ್ಣಗಳನ್ನು ಎರಚಿ ಆಚರಿಸಿದರೆ, ಕರಾವಳಿಯ ಕುಡುಬಿ ಸಮುದಾಯ ತಲೆಗೆ ಕನಕಾಂಬರ ಹೋವು ಮುಡಿದು, ಹೆಗಲಿಗೆ ಮಣ್ಣಿನ ಮಡಕೆಗಾತ್ರದ ಗುಮಟೆಯನ್ನು ಹಾಕಿ, ಕಾಲ್ಗೆಜ್ಜೆ ಯೊಂದಿಗೆ ವಿಶಿಷ್ಟ ವೇಷಭೂಷಣ ತೊಟ್ಟು ಮನೆ ಮನೆಗೆ ಹೋಗಿ ರಾಮಾಯಣ, ಮಹಾಭಾರತ, ಮುಂತಾದ ಪೌರಾಣಿಕ ಹಾಡುಗಳನ್ನು ಹಾಡುತ್ತಾ..ಕೋಲಾಟವಾಡಿ ಮನೆಯ ಯಜಮಾನ ಕೊಟ್ಟ ಅಕ್ಕಿ,ಕಾಯಿ, ವೀಳ್ಯದೆಲೆ ಅಡಿಕೆ ತೆಗೆದುಕೊಂಡು ಬರುತ್ತಾರೆ, ಕೊನೆಯ ದಿನ ತಮ್ಮ ಕೂಡುಕಟ್ಟಿನ ಯಜಮಾನ ಮನೆಯಲ್ಲಿ ಅಥವಾ ಸಮುದಾಯದ ದೇವಸ್ಥಾನಗಳಲ್ಲಿ ರಾಮಾಯಣದಲ್ಲಿ ಬರುವ ರಾಮಸೇತು,ಲಂಕಾ ದಹಣ, ಮುಂತಾದ ಪೌರಾಣಿಕ ಹಾಡುಗಳನ್ನು ಹಾಡಿ, ಓಕುಳಿಯಾಟವಾಡಿ, ಅಗ್ನಿ ಹಾರಿ, ಸಾರ್ವಜನಿಕ ಅನ್ನಸಂತರ್ಪಣೆ ಯೊಂದಿಗೆ ಹೋಳಿಯನ್ನು ಕೊನೆಗೋಳಿಸುತ್ತಾರೆ..,ಹೋಳಿ ಕೊನೆಯ ದಿನ ತಮ್ಮ ಸಮುದಾಯದ ಯುವ ಪ್ರತಿಭೆಗಳ ಕಾರ್ಯಕ್ರಮ, ಪ್ರತಿಭೆಗಳ ಸನ್ಮಾನ, ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
0 Comments