ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್

ಜಾಹೀರಾತು/Advertisment
ಜಾಹೀರಾತು/Advertisment

 ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್




ಬಿಲ್ಲವ, ಈಡಿಗ, ನಾಮಧಾರಿ ಸಹಿತ 26 ಉಪ ಪಂಗಡಗಳ ಬಹು ಬೇಡಿಕೆಯ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ರಚನೆಯು ಇನ್ನೆರಡು ದಿನಗಳಲ್ಲಿ ಘೋಷಣೆ ಆಗಲಿದೆ. ಆ ಜವಬ್ದಾರಿ ನನ್ನದು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 



ಈ ಹಿಂದೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ನಿಗಮ ಘೋಷಣೆ ಆಗದೇ ಇರುವುದು ಬಿಲ್ಲವ ಸಮುದಾಯದ ಅಸಮದಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಖುದ್ದು ಸಚಿವರೇ ಟ್ವೀಟ್ ಮಾಡಿದ್ದು ಕೆಲವೇ ದಿನಗಳಲ್ಲಿ ನಿಗಮ ಘೋಷಣೆ ಆಗುವ ಭರವಸೆ ಇದೆ.

Post a Comment

0 Comments