ಹಂಡೇಲು ಶಾಲ ಶಿಕ್ಷಕದೊರೆಸ್ವಾಮಿ ಕೆ ಎನ್ ಗೆ ಪಿಎಚ್. ಡಿ ಪದವಿ.

ಜಾಹೀರಾತು/Advertisment
ಜಾಹೀರಾತು/Advertisment

 ದೊರೆಸ್ವಾಮಿ ಕೆ ಎನ್ ಗೆ ಪಿಎಚ್. ಡಿ ಪದವಿ.



ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ 

ಡಾ. ಚಂದ್ರಶೇಖರ. ಎಸ್ ರವರ ಮಾರ್ಗದರ್ಶನದಲ್ಲಿ ದೊರೆಸ್ವಾಮಿ ಕೆ ಎನ್ ರವರು "ಕರ್ನಾಟಕದ ಬೌದ್ಧರು-  ಸಮಾಜಶಾಸ್ತ್ರೀಯ ಅಧ್ಯಯನ" ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್ . ಡಿ) ಪದವಿ ನೀಡಿದೆ.

ದೊರೆಸ್ವಾಮಿ ಕೆ. ಎನ್ ಮೂಲತಃ ಬೇಲೂರು ತಾಲೂಕಿನ ಕ್ಯಾತನಕೆರೆ ಗ್ರಾಮದ ಶ್ರೀಮತಿ ಸಾಕಮ್ಮ ಮತ್ತು ನರಸಿಂಹ ಶೆಟ್ಟಿ ಅವರ ಪುತ್ರನಾಗಿದ್ದು. ದ. ಕ ಜಿಲ್ಲಾ ಬೌದ್ಧ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧಮ್ಮಚಾರಿ ಎಸ್.ಆರ್ ಲಕ್ಷ್ಮಣ ಮತ್ತು ಶಶಿಕಲಾ ಗಾಂಧಿನಗರ, ಕಾವೂರು ಅವರ ಪುತ್ರಿ ಜ್ಯೋತಿ ಅವರ ಪತಿಯಾಗಿದ್ದು ಪ್ರಸ್ತುತ ದ.ಕ.ಜಿಲ್ಲೆ ಮೂಡುಬಿದರೆ ತಾಲೂಕಿನ ಸ. ಉ.ಹಿ. ಪ್ರಾ.ಶಾಲೆ.ಹಂಡೇಲು ಇಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6-8) ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, (ಸ್ವಯತ್ತ)ಹಾಸನ. ಇದರ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಯನ ಮಂಡಳಿಯ ಸದಸ್ಯರಾಗಿ (BOS), ಕ. ರಾ. ಸ. NPS ನೌಕರರ ಸಂಘದ ಮೂಡುಬಿದರೆ ತಾಲೂಕು ಅಧ್ಯಕ್ಷರಾಗಿ, ಕ. ರಾ. ಸ. ನೌಕರರ ಸಂಘದ ಜಿಲ್ಲಾ ಪ್ರತಿನಿಧಿಯಾಗಿ, ಕರ್ನಾಟಕ ರಾಜ್ಯ ಜಿ.ಪಿ. ಟಿ. ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾಗಿ,ಮೂಡುಬಿದರೆ   ಶಿಕ್ಷಕ ದಿನಾಚರಣೆ ಸಮಿತಿಯ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Post a Comment

0 Comments