ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ‌ ಮೇಲೆ ಬೀದಿನಾಯಿ ದಾಳಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ‌ ಮೇಲೆ ಬೀದಿನಾಯಿ ದಾಳಿ



ಮೂಡುಬಿದಿರೆ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ  ಇಂಜೆಕ್ಷನ್  ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. 

ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ನಾಯಿ ಕಚ್ಚಿ  ಗಾಯಗೊಳಿಸಿದೆ.  ಇಂಜೆಕ್ಷನ್  ಗಾಗಿ ಮಗುವನ್ನು ಕುರ್ಚಿಯಲ್ಲಿ ಕುಳ್ಳಿ ರಿಸಿ  ಪಕ್ಕದಲ್ಲಿ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಹಾಗೂ ತಾಯಿ ಇದ್ದರು. ಆಸ್ಪತ್ರೆಯ ಬಳಿ ಓಡಾಡುತ್ತಿದ್ದ ಬೀದಿ ನಾಯಿ ಯೊಂದು ಏಕಾಏಕಿ  ದಾಳಿ ನಡೆಸಿತ್ತು. ಈ ಘಟನೆ ಆಸ್ಪತ್ರೆ ಗೆ ಬರುವ ಸಾರ್ವಜನಿಕರನ್ನು ಆತಂಕಕ್ಕೀ ಡುಮಾಡಿದೆ.  

ಪೇಟೆಯಲ್ಲಿ ಇದಕ್ಕೂ ಮೊದಲು ಈ ಬೀದಿನಾಯಿ ಇಬ್ಬರಿಗೆ ಕಚ್ಚಿದೆ ಎನ್ನಲಾಗಿದೆ. ನಾಯಿ ಕಚ್ಚಿದಕ್ಕೆ ಒಂದು ಇಂಜೆಕ್ಷ ನನ್ನು ಸರಕಾರಿ ಆಸ್ಪತ್ರೆಯಲ್ಲಿ ನೀಡಿದ್ದರೆ ಇನ್ನೊಂದು Immunoglobulin ಇಂಜೆಕ್ಷನ್ ಮೂಡುಬಿದಿರೆ ಆರೋಗ್ಯ ಕೇಂದ್ರಕ್ಕೆ ಪೂರೈಕೆ ಇಲ್ಲದಿರುವುದರಿಂದ ಮಗುವಿನ ಮನೆಯವರು   ಖಾಸಗಿ ಆಸ್ಪತ್ರೆಯಿಂದ ತರಿಸಿ  ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿಗಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಿತ್ರಾ ಅವರನ್ನು ಪತ್ರಿಕೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ ನಾನು ಮೀಟಿಂಗ್ ಗೆ ಹೊರಗಡೆ ಹೋಗಿದ್ದೆ, ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಆದರೆ ಇನ್ನೊಂದು ಮೂಲಗಳ ಪ್ರಕಾರ ಈ ಘಟನೆಯ ಬಗ್ಗೆ ಇನ್ಚಾರ್ಜ್ ವೈದ್ಯರಾಗಲಿ, ನರ್ಸ್ ಗಳಾಗಲಿ ಹಿರಿಯ ವೈದ್ಯಾಧಿಕಾರಿಗಳಿಗೆ ಮಾಹಿತಿಯೇ ನೀಡಿರಲಿಲ್ಲ ಎನ್ನಲಾಗಿದೆ.

Post a Comment

0 Comments