ಅಡಿಕೆ ಕೃಷಿಕರಿಗೆ ಕೇಂದ್ರ ಗಿಫ್ಟ್:ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಧನ್ಯವಾದ ಅರ್ಪಿಸಿದ ಕ್ಯಾಂಪ್ಕೊ.!
ಇತ್ತೀಚೆಗೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ರವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸಂಸ್ಥೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಲ್ಲಿ ಬೆಳೆದ ಅಡಿಕೆಯನ್ನು ನಮ್ಮ ಗುಜರಾತಿಗಳು ತಿನ್ನುತ್ತಾರೆ ಎಂದು ಹೇಳಿದ್ದರು.ಈ ಕಾರ್ಯಕ್ರಮ ನಡೆದ ಕೆಲವೇ ದಿನಗಳಲ್ಲಿ ರಾಜ್ಯದ ಅಡಿಕೆ ರೈತರಿಗೆ ಶುಭಸುದ್ಧಿಯೊಂದು ಬಂದಿದೆ.
ಕೇಂದ್ರ ಸರ್ಕಾರ ವಿದೇಶದಿಂದ ಆಮದು ಮಾಡಿಕೊಂಡ ಅಡಿಕೆಗೆ 100 ರೂಪಾಯಿ ಹೆಚ್ಚುವರಿ ಬೆಲೆಯನ್ನು ಹೇರಿದೆ. ಈ ಹಿಂದೆ 251 ರೂಪಾಯಿ ಇದ್ದ ವಿದೇಶಿ ಆಮದು ಮಾಡಿಕೊಂಡ ಅಡಿಕೆಗೆ ಈಗ 351 ರೂಪಾಯಿ ಆಗಿದೆ. ಹೀಗಾಗಿ ವಿದೇಶದಿಂದ ಭಾರತಕ್ಕೆ ಆಮದುಗೊಳ್ಳುವ ಅಡಿಕೆ ಪ್ರಮಾಣ ಕಡಿಮೆ ಆಗಲಿದೆ. ಹೀಗಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಬೆಳೆಯುವ ಅಡಿಕೆಗೆ ಬೇಡಿಕೆ ಹೆಚ್ಚಾಗಲಿದ್ದು ಅಡಿಕೆ ಕೃಷಿಗಾರರ ಮೊಗದಲ್ಲಿ ಸಂತಸ ಮೂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಮತ್ತು ಈ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
0 Comments