ಫಿನಾಲೆ ವೇದಿಕೆಯಲ್ಲಿ ಕಣ್ಣೀರಿಟ್ಟ ಕಿಚ್ಚ: ಬಿಗ್ ಬಾಸ್ ಶೋನಲ್ಲಿ ಅಂಥದ್ದೇನಾಯ್ತು?

ಜಾಹೀರಾತು/Advertisment
ಜಾಹೀರಾತು/Advertisment

ನಟ ಸುದೀಪ್ ಅವರಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಟಾರ್ ಮೆರುಗು ಸಿಕ್ಕಿದೆ ಎಂದರೆ ತಪ್ಪಿಲ್ಲ. ಮೊದಲ ಸೀಸನ್‌ನಿಂದ 9ನೇ ಸೀಸನ್ ತನಕ ಅವರು ತುಂಬ ಅಚ್ಚುಕಟ್ಟಾಗಿ ಈ ಶೋ ನಡೆಸಿಕೊಟ್ಟಿದ್ದಾರೆ.

ಇದೊಂದು ಕಾಂಟ್ರವರ್ಸಿ ಕಾರ್ಯಕ್ರಮ ಎಂಬ ಅಭಿಪ್ರಾಯ ಬಹುತೇಕರಲ್ಲಿ ಇದೆ. ಕೆಲವೊಮ್ಮೆ ಸ್ಪರ್ಧಿಗಳ ಮಾತು ಮತ್ತು ನಡವಳಿಕೆ ಮಿತಿ ಮೀರುವುದುಂಟು. ಅಂಥ ಸಂದರ್ಭಗಳನ್ನು ಕಿಚ್ಚ ಸುದೀಪ್ ತುಂಬ ಘನತೆಯಿಂದ ನಿಭಾಯಿಸಿದ್ದುಂಟು.

ಡಿಸೆಂಬರ್ 31ರಂದು 'ಬಿಗ್ ಬಾಸ್ ಕನ್ನಡ ಸೀಸನ್ 9'ಕ್ಕೆ ಫಿನಾಲೆ ನಡೆಯಿತು. ಈ ವೇದಿಕೆಯಲ್ಲಿ ಸುದೀಪ್ ಅವರು ಕಣ್ಣೀರು ಹಾಕಿದರು. ಅವರು ಭಾವುಕರಾಗಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸ್ಪರ್ಧಿ ಎಲಿಮಿನೇಟ್ ಆದಾಗ ಅವರ ಜರ್ನಿಯನ್ನು ಮೆಲುಕು ಹಾಕುವಂತಹ ವಿಡಿಯೋ ಬಿತ್ತರ ಮಾಡಲಾಗುತ್ತಿದೆ. ಅದೇ ರೀತಿ, ಕೊನೇ ಸಂಚಿಕೆ ಆದ್ದರಿಂದ ಸುದೀಪ್ ಅವರ ಬೆಸ್ಟ್ ಕ್ಷಣಗಳನ್ನು ನೆನಪಿಸುವಂತಹ ವಿಡಿಯೋವನ್ನು ಶನಿವಾರ ಪ್ರಸಾರ ಮಾಡಲಾಯಿತು.

ಅವರ ಬದ್ಧತೆ, ನಾಯಕತ್ವ, ನಿರೂಪಣೆಯ ಶೈಲಿ ಹಾಗೂ ಒಟ್ಟಾರೆ ವ್ಯಕ್ತಿತ್ವವನ್ನು ಅದರಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು. ಆ ವಿಡಿಯೋ ನೋಡಿ ಸುದೀಪ್ ಎಮೋಷನಲ್ ಆದರು. 'ನನಗೆ ಈ ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು. ಈ ವಿಡಿಯೋದಲ್ಲಿ ನನಗೆ ನಾನು ಕಾಣಿಸಲಿಲ್ಲ. ನಿಮ್ಮೆಲ್ಲರ ಪ್ರೀತಿ ಕಾಣಿಸಿತು' ಎಂದು ಅವರು ಹೇಳಿದರು.

Post a Comment

0 Comments