ಹಸೆಮಣೆ ಏರಲಿದ್ದ ಯುವಕ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಜ.22ರಂದು ಹಸೆಮಣೆಯೇರಲಿದ್ದ ಇರುವೈಲಿನ  ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ  ನಡೆದಿದೆ.

ಇರುವೈಲು ಗುಂಡಾಲ ಮನೆಯ ಸದಾನಂದ ಶೆಟ್ಟಿ ಅವರ ಪುತ್ರ ಪ್ರತಾಪ್ ಶೆಟ್ಟಿ( 30)ಆತ್ಮಹತ್ಯೆ ಮಾಡಿಕೊಂಡ ಯುವಕ. ಕೃಷಿಕನಾಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಸಾಧು ಸ್ವಭಾವದ ಯುವಕನಾಗಿದ್ದ ಈತನಿಗೆ ಆರ್ಥಿಕವಾಗಿ ತೊಂದರೆ ಇರಲಿಲ್ಲ. 

ಆದರೆ ವಿಡಿಯೋ ಕಾಲ್ ಜಾಲಕ್ಕೆ ಸಿಲುಕಿಕೊಂಡಿರಬಹುದೇ ಎಂಬ ಸಂಶಯ ಉಂಟಾಗಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

Post a Comment

0 Comments