ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

 


ಮೂಡುಬಿದಿರೆ:  ಇಲ್ಲಿನ ವಿಶ್ವ ವಿದ್ಯಾನಿಲಯ ಕಾಲೇಜು ಬನ್ನಡ್ಕ  ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯು ನಡೆಯಿತು.   ಕಾಲೇಜಿನ ಇತಿಹಾಸ ವಿಭಾಗದ ಡಾ.ಶಿವರಾಜ್ ಅರಸ್  ಮುಖ್ಯ ಅತಿಥಿಯಾಗಿ ಭಾಗವಹಿಸಿ  ಮಾತನಾಡಿ ಪ್ರಪಂಚದಲ್ಲಿ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಮನುಷ್ಯನಾದವನನ್ನು ಗೌರವಿಸಬೇಕು. ಮಾನವ ಹಕ್ಕುಗಳನ್ನು ನಿರಾಕರಿಸಿದರೆ ಅದು ಮನುಷ್ಯತ್ವವನ್ನೇ ನಿರಾಕರಿಸಿದಂತೆ. ಮಾನವ ಹಕ್ಕುಗಳ ಉಲ್ಲಂಘನೆ ಆಗಬಾರದು. ಮಾನವತೆ, ಮನುಷ್ಯತ್ವಕ್ಕೆ ಗೌರವ ಕೊಟ್ಟು ಬದುಕಬೇಕು ಎಂದರು. 

 ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ  ಶಶಿಕಲಾ ಹಾಗೂ ರೆಡ್ ಕ್ರಾಸ್ ವಿಭಾಗದ ಅಧಿಕಾರಿ ಪುಷ್ಪಲತಾ, ರೆಡ್ ಕ್ರಾಸ್ ವಿದ್ಯಾರ್ಥಿಗಳು ಹಾಗೂ ಇತರ  ಬೋಧಕ - ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು. 

ನಂತರ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿ ಮನಿಷಾ, ಅಭಿಲಾಷ್ ನಿರೂಪಿಸಿ, ನಿಖಿತಾ ಸ್ವಾಗತಿಸಿದರು, ಶ್ರಾವ್ಯ ಧನ್ಯವಾದಗೈದರು.

Post a Comment

0 Comments

Advertisement