ಮೂಡುಬಿದಿರೆ ತಾಲೂಕಿನಲ್ಲಿ " ನಮ್ಮ ಕ್ಲಿನಿಕ್" ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಜನರಿಗೆ ಆರೋಗ್ಯದ ಸಮಸ್ಯೆ ಕಂಡು ಬಂದಾಗ ಆ ಗ್ರಾಮದಲ್ಲಿ ಉಚಿತವಾಗಿ ಸೇವೆಯ ಪರಿಹಾರ ಸಿಗುವ ಜನಾಭಿವೃದ್ಧಿಯ ಯೋಜನೆಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

  ಅವರು ಜಿಲ್ಲಾಡಳಿತ , ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಜಿಲ್ಲೆ ಮಂಗಳೂರು, ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರ  ಮೂಡುಬಿದಿರೆ ಇದರ ವತಿಯಿಂದ   ಪುರಸಭಾ ವ್ಯಾಪ್ತಿಯ ಗಂಟಾಲ್ ಕಟ್ಟೆಯಲ್ಲಿ ಬುಧವಾರವ"ನಮ್ಮ ಕ್ಲಿನಿಕ್" ನ್ನು ಉದ್ಘಾಟಿಸಿ ಮಾತನಾಡಿದರು.

ಸಿ.ಎಂ ಮತ್ತು ಆರೋಗ್ಯ ಸಚಿವರ ಕನಸಿನ ಕೂಸಾಗಿರುವ ಈ ಯೋಜನೆಯು 15ನೇ ಹಣಕಾಸಿನಿಂದಾಗಿದೆ. ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿಯೂ ಏಕಕಾಲದಲ್ಲಿ "ನಮ್ಮ ಕ್ಲಿನಿಕ್" ಲೋಕಾರ್ಪಣೆಯಾಗಿದೆ. 

ಬಡವರಿಗೆ ಉತ್ತಮ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಸಿಆರ್ ಎಸ್ ಪಂಡ್ ನಲ್ಲಿ ಮೂಡುಬಿದಿರೆ ಮತ್ತು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಎರಡೆರಡು ಡಯಾಲಿಸಿಸ್ ಮೆಷಿನ್ ಗಳನ್ನು ನೀಡಲಾಗಿದೆ. ಆದರೆ ಟೆಕ್ನಿಷಿಯನ್ ನವರ ಕೊರತೆಯಿಂದಾಗಿ ಮೂಲೆಯಲ್ಲೇ ಇದೆ ಈ ಬಗ್ಗೆ  ಮುಂದಿನ ದಿನಗಳಲ್ಲಿ ಟೆಕ್ನಿಷಿಯನ್ ಗಳನ್ನು ನೀಡಲು ಆಗ್ರಹಿಸಲಾಗುವುದು ಎಂದ ಅವರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ. ಡಾಕ್ಟರ್ ಗಳು ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದಾಗ ದೇವರು ಉತ್ತಮ ಫಲ ನೀಡುತ್ತಾರೆಂದರು.

ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯರಾದ ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಉದ್ಯಮಿಗಳಾದ ಶ್ರೀಧರ್ ರಾವ್,  ಕೆ.ಶ್ರೀಪತಿ ಭಟ್, ಶಾರದಾ ಪೈ, ಶಶಿಧರ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ/ ಚಿತ್ರಾ, "ನಮ್ಮ ಕ್ಲಿನಿಕ್ " ನ ಡಾ/ ಮಿಸ್ರಿಯಾ, ಹಿರಿಯ ಮಹಿಳಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ, ಸಮುದಾಯ ಆರೋಗ್ಯ ಅಧಿಕಾರಿ ಸೋಮನಾಥ್, ಸ್ಟಾಪ್ ನಸ್ ೯ ಸುನೀತಾ, ಲ್ಯಾಬ್ ಟೆಕ್ನಿಷಿಯನ್  ಸೌಜನ್ಯ ಮತ್ತಿತರರಿದ್ದರು.

Post a Comment

0 Comments