ಭೀಕರ ಅಪಘಾತ ಮಗು ಸೇರಿ ಮೂರು ಮಂದಿ ಸ್ಥಳದಲ್ಲಿಯೇ ಮೃತ್ಯು

 



ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಎಂಬಲ್ಲಿ  ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದೂವರೆ ವರ್ಷದ ಮಗು ಸಹಿತ ಮೂರು ಮಂದಿ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.

   ಬೆಂಗಳೂರು ಮೂಲದ ದಂಪತಿಗಳು . ಒಂದೂವರೆ ವರ್ಷದ ಮಗುವಿನೊಂದಿಗೆ ಬೆಳ್ತಂಗಡಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ವಿಶಾಲ್ ಬಸ್ಸಿಗೆ ಢಿಕ್ಕಿ ಹೊಡೆದು ಬಸ್ಸಿನ ಅಡಿಭಾಗದಲ್ಲಿ ಸಿಕ್ಕಿ  ಅಪ್ಪಚ್ಚಿಯಾಗಿ  ಸ್ಥಳದಲ್ಲಿಯೇ  ಮೂವರು ಮೃತಪಟ್ಟಿದ್ದಾರೆ. 

 ಕಾರು ಬೆಂಗಳೂರು ಮೂಲದೆಂದು ತಿಳಿದು ಬಂದಿದ್ದು ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದ್ದಾರೆ.

 ಮೂವರ ಮೃತದೇಹಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಹೊರ ತೆಗೆಯಲಾಗಿದೆ.

 ದಂಪತಿಗಳು ಮೂವತ್ತು ವರ್ಷದೊಳಗಿನವರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

Post a Comment

0 Comments

Advertisement