ಜಾಂಬೂರಿಯಲ್ಲಿ ಕಮ್ಮಾರಿಕೆ ಕುಟುಂಬದ ಕಾರ್ಯಕ್ಕೆ ಎಲ್ಲೆಡೆ ಉತ್ತಮ ಶ್ಲಾಘನೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಆಳ್ವಾಸ್ ಜಾಂಬೂರಿಯಲ್ಲಿ ವಿವಿಧ ರೀತಿಯ ಸ್ಟಾಲ್‌ಗಳ ಸಾಲುಗಳಲ್ಲಿ ಒಂದು ಕುಟುಂಬದ ದಂಪತಿಗಳಿಬ್ಬರು ತನ್ನ ಮಕ್ಕಳು ಹಾಗೂ ತಮ್ಮೆರಡು ಸಾಕುನಾಯಿಗಳೊಂದಿಗೆ ಕಮ್ಮಾರಿಕೆಯಲ್ಲಿ ನಿರತರಾಗಿರುವುದನ್ನು ನೋಡಬೇಕು. ಅದೊಂದು ಸುಂದರ ಕುಟುಂಬ. ಕಠಿಣ ದುಡಿಮೆಯೇ ದೇವರು ಎಂಬ ಧ್ಯೇಯ ವಾಕ್ಯದೊಂದಿಗೆ ಶ್ರಮಪಟ್ಟು ಕಮ್ಮಾರಿಕೆ ಮಾಡುವ ದೃಶ್ಯವನ್ನು ಮುಗಿಬಿದ್ದು ಅಚ್ಚರಿಯಿಂದ ನೋಡುವ ಜನರು ಈ ಕತ್ತಿ, ಚಾಕು ಅಥವಾ ಸಲಕರಣೆಗಳನ್ನು ತಯಾರಿಸುವುದರ ಹಿಂದೆ ಇಷ್ಟೊಂದು ಶ್ರಮವಿದೆಯೇ ಎಂಬುದನ್ನು ಗೊಣಗುತ್ತಾ ವೀಕ್ಷಿಸಿ, ಅವರ ಕೆಲಸಗಳಿಗೆ ಮನದಲ್ಲಿಯೇ ಅಭಿನಂದನಯನ್ನು ಸಲ್ಲಿಸಿದ ಸನ್ನಿವೇಶವು ಜಾಂಬೂರಿಯ ಕಮ್ಮಾರಿಕೆ ಮಾಡುವವರ ಸ್ಟಾಲ್‌ನಲ್ಲಿ ಕಂಡು ಬಂತು. 

ಹೌದು ಇವರು ಮೂಲತಃ ಕಾರ್ಕಳ ತಾಲೂಕಿನ ಬೈಲೂರಿನ ಯರ್ಲಪಾಡಿ ಗ್ರಾಮದ ವೈ. ದಾಮೋದರ ಆಚಾರ್ಯ ಹಾಗೂ ಪುಷ್ಪಾವತಿ ಡಿ ಆಚಾರ್ಯ ದಂಪತಿಗಳು. ಇವರ ಪುತ್ರ ಹಾಗೂ ಪುತ್ರಿಯರೊಂದಿಗೆ ಮೇಳಗಳಿಗೆ ಹೋಗಿ ತಮ್ಮ ಕಸುಬನ್ನು ಮಾಡುತ್ತಾ ಬಂದಿದ್ದಾರೆ. ಇವರು ಸುಮಾರು 35 ವರ್ಷಗಳಿಂದ ಕಮ್ಮಾರಿಕೆಯನ್ನು ಮಾಡುತ್ತಾ ಬಂದಿದ್ದು, ಇವರ ಕೆಲಸಗಳಿಗೆ ಹಲವಾರು ಕೊಂಕು ಮಾತುಗಳು ಬಂದರೂ ಅದನ್ನು ಲೆಕ್ಕಿಸದೇ ತಮ್ಮ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ದಾಮೋದರ ದಿನನಿತ್ಯವೂ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 11 ರವರೆಗೆ ನಿರಂತರವಾಗಿ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಇವರು ಕತ್ತಿ, ಹಾರೆ, ಚೂರಿ, ಮೆಟ್ಟುಕತ್ತಿ, ಹಾಗೂ ಇನ್ನಿತರ ಸಲಕರಣೆಗಳನ್ನು ಇವರೇ ಸ್ವತಃ ಇದ್ದಿಲುಗಳನ್ನು ಬಳಸಿ ಬೆಂಕಿಯಲ್ಲಿ ಕಾಯಿಸಿ ಹರಿತಗೊಳಿಸಿ ತಯಾರಿಸುತ್ತಾರೆ. ಇವರ ಈ ಪರಿಶ್ರಮಕ್ಕೆ ಶಹಭಾಷ್ ಎನ್ನಲೇಬೇಕು.

Post a Comment

0 Comments