ವೈಯಕ್ತಿಕ ಧನಸಹಾಯ, ಹೊಸ ರಿಕ್ಷಾ,ಚಿಕಿತ್ಸೆಯ ವೆಚ್ಚ: ಕುಕ್ಕರ್ ಬಾಂಬ್ ಸ್ಫೋಟದ ಗಾಯಾಳು ಜೊತೆಗೆ ನಿಂತ ಸಂಸದ ನಳಿನ್

ಜಾಹೀರಾತು/Advertisment
ಜಾಹೀರಾತು/Advertisment


 ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಭಯೋತ್ಪಾದಕ ಕೃತ್ಯದಿಂದ ತೀವ್ರ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ರವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.


ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೆಲೆಯಿಂದ 50,000 ರೂಪಾಯಿ ಧನಸಹಾಯ ನೀಡಿದರು. ಮಾತ್ರವಲ್ಲದೆ ಅವರ ಜೀವನಾಧಾರವಾಗಿದ್ದ ಆಟೋ ರಿಕ್ಷಾ ಭಾಗಶಃ ಹಾನಿಯಾಗಿದ್ದು ಹೊಸದಾಗಿ ರಿಕ್ಷಾ ತೆಗೆಸಿಕೊಡುವ ಭರವಸೆ ನೀಡಿದ್ದಾರೆ. ಹಾಗೂ ಅವರ ಆರೋಗ್ಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.


 ಗಾಯಾಳು ಪುರುಷೋತ್ತಮ ಪೂಜಾರಿ ಹಾಗೂ ಅವರ ಕುಟುಂಬದ ಜೊತೆಗೆ ನಮ್ಮ ಸರ್ಕಾರ ಮತ್ತು ಭಾರತೀಯ ಜನತಾ ಪಾರ್ಟಿ ನಿಲ್ಲಲಿದೆ. ಅವರ ಯಾವುದೇ ಸಮಸ್ಯೆಗಳಿದ್ದರೂ ಅವರ ಜೊತೆಯಾಗುತ್ತೇವೆ ಎಂದು ಸಂಸದರು ತಿಳಿಸಿದರು.

Post a Comment

0 Comments