ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಭೇಟಿ ನೀಡಿ ಜೀರ್ಣೋದ್ಧಾರದ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.
ಶ್ರೀ ಕ್ಷೇತ್ರಕ್ಕೆ ಮುಂದಿನ ವಾರದಲ್ಲಿ ಮುಜರಾಯಿ ಸಚಿವರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರಲ್ಲಿ ಗರಿಷ್ಠ ಪ್ರಮಾಣದ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ್ ವಿ.ಶೆಟ್ಟಿ, ಪ್ರಮುಖರಾದ ಜಯಾನಂದ ಶೆಟ್ಟಿ, ರುಕ್ಕಯ್ಯ ಪೂಜಾರಿ, ಸುಕೇಶ್ ಶೆಟ್ಟಿ, ಅಶ್ವಥ್ ಪಣಪಿಲ, ಬಲರಾಮ್ ಪ್ರಸಾದ್ ಭಟ್, ಶಶಿಧರ್ ದೇವಾಡಿಗ ಗೇಂದೊಟ್ಟು, ಅಭಿಲಾಷ್, ಸುದೀಪ್ ಬುನ್ನನ್ ಮತ್ತಿತರರಿದ್ದರು.
0 Comments