ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಹೊನ್ನಯ್ಯ ಕುಲಾಲ್ ಗೆ ಪಂಚಶಕ್ತಿಯಿಂದ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ದ.ಕ ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಹೊನ್ನಯ್ಯ ಕುಲಾಲ್ ಇವರಿಗೆ  ಮೂಡುಬಿದಿರೆಯ ಪಂಚಶಕ್ತಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ, ದೇಣಿಗೆಯನ್ನು ನೀಡಲಾಯಿತು.

ಅದೆಷ್ಟೂ ನಿರ್ಗತಿಕರಿಗೆ ಆಸರೆ ಕಲ್ಪಿಸಿ ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಿ ಜೊತೆಗೆ ಜನಜಾಗೃತಿ ಮೂಡಿಸಿ, ಬಡಜನರ ಅಶಕ್ತರ ಆಪತ್ಭಾಂದವರಾಗಿ ದಿವಂಗತ ಗೋಪಾಲ ಸಾಲ್ಯಾನ್ ರವರ ಪುತ್ರ ಹೊನ್ನಯ್ಯ ಕುಲಾಲ್ ರವರು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್‌' ಎಂಬ ಸಂಸ್ಥೆಯನ್ನು ಕಳೆದ 2006 ನೇ ಇಸವಿಯಲ್ಲಿ ಸ್ಥಾಪಿಸಿ ಸಮಾಜ ಸೇವೆಗೈಯುತ್ತಿದ್ದಾರೆ. ಇವರ‌ ಈ ಸಮಾಜಸೇವೆಗಾಗಿ  2022 ನೇ ಸಾಲಿನ  ದ.ಕ.ಜಿಲ್ಲಾ ರಾಜೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ.

 ಪಂಚಶಕ್ತಿ ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ, ಉಪಾಧ್ಯಕ್ಷೆ  ಉಷಾ ಭಂಡಾರಿ, ನಿರ್ದೇಶಕರುಗಳಾದ ರಾಜೇಂದ್ರ ಬಿ,  ರಮೇಶ್. ಎಸ್.ಶೆಟ್ಟಿ,  ರವೀಂದ್ರ ಕರ್ಕೇರ,  ರತ್ನಾಕರ ಪೂಜಾರಿ,  ಗೋಪಾಲ್ ಶೆಟ್ಟಿಗಾರ್, ಹೇಮಾ.ಕೆ.ಪೂಜಾರಿ,  ನಾಗೇಶ್ ನಾಯ್ಕ್, ಶಂಕರ್ ನಾರಾಯಣ ಭಟ್, ಸುರೇಶ್ ಪೂಜಾರಿ ಎಂ, ಶರತ್ ಜೆ ಶೆಟ್ಟಿ

ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯು.ಆರ್.ಮಧ್ಯಸ್ಥ ಈ ಸಂದರ್ಭದಲ್ಲಿದ್ದರು.

Post a Comment

0 Comments