ಮೂಡುಬಿದಿರೆ: ಭಯೋತ್ಪಾದನೆ ಹಾಗೂ ಲವ್ ಜಿಹಾದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ - ಬಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದ ಬಳಿ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದೇಶಾದ್ಯಂತ ಬಾಂಬನ್ನು ಸ್ಫೋಟಿಸಿ ಸಮಾಜದಲ್ಲಿ ಭಯವನ್ನು ನಿರ್ಮಿಸುವ ಕೆಲಸವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಹಿಂದೆ ಭಯೋತ್ಪಾದನೆ ಎಂದರೆ ಕಾಶ್ಮೀರದ ನೆನಪಾಗುತ್ತಿತ್ತು. ಆದರೆ ಇಂದು ಭಯೋತ್ಪಾದನೆ ಎಂಬುದು ಕರಾವಳಿಗೆ ಕಾಲಿಟ್ಟಿದೆ. ಕರಾವಳಿಯಲ್ಲಿ ಬಾಂಬ್ ನ್ನು ಸ್ಪೋಟಿಸುವುದರ ಮೂಲಕ ಕರಾವಳಿಯ ಜನರಲ್ಲಿ ಭಯವನ್ನು ಹುಟ್ಟಿಸುವಂತಹ ಪ್ರಯತ್ನವನ್ನು ಉಗ್ರಗಾಮಿಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅಕ್ಕಪಕ್ಕದಲ್ಲಿಯೇ ಉಗ್ರರಿರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಮ್ಮ ಪರಿಸರದಲ್ಲಿ ಯಾರೇ ಅನುಮಾನಸ್ಪಾದ ವ್ಯಕ್ತಿ ಕಂಡು ಬಂದರೆ ಅದನ್ನು ನಿರ್ಲಕ್ಷಿಸದೇ ಪೊಲೀಸರಿಗೆ ತಿಳಿಸುವಂತೆ ಎಚ್ಚರಿಕೆ ನೀಡಿದರು.
ಹಿಂದೂ ಹೆಣ್ಮಕ್ಕಳ ಮೇಲೆ ಲವ್ ಜಿಹಾದ್ ಹೆಸರಿನಲ್ಲಿ ಜಿಹಾದಿಗಳು ಜಿಹಾದ್ ಯುದ್ಧವನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಇಂದು ಅನೇಕ ಅಮಾಯಕ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗಿ ತನ್ನ ಜೀವನವನ್ನೇ ಕಳೆದುಕೊಂಡಂತಹ ನಿದರ್ಶನಗಳು ಕಣ್ಣ ಮುಂದಿದೆ ಎಂದ ಅವರು ಹಿಂದೂ ಸಮಾಜದಲ್ಲಿರುವ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ನೀಚ ಮುಸ್ಲಿಂ ಸಮುದಾಯದ ಪ್ರೀತಿ ಎಂಬ ನಾಟಕೀಯ ಬಲೆಗೆ ಬೀಳದೆ ಸ್ವಾಭಿಮಾನದಿಂದ ಸಮಾಜವನ್ನು
ನಿರ್ಮಾಣ ಮಾಡಬೇಕೆಂದು ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಒಟ್ಟಾರೆಯಾಗಿ ಇಡೀ ಸಮಾಜದಲ್ಲೊಂದು ಜಾಗೃತಿ ನಿರ್ಮಾಣವಾಗಬೇಕು. ಯುವಕರು ಸಮಾಜದ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಬೇಕೆಂದ ಅವರು ನಮ್ಮ ಪ್ರದೇಶದಲ್ಲಿ ಭಯೋತ್ಪಾದನೆಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದು ಭಯೋತ್ಪಾದನೆಯನ್ನು ಮಟ್ಟ ಹಾಕುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆಯನ್ನು ನೀಡಿದರು.
ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 Comments