ಕೋಟದಲ್ಲಿ ಹೊಳಪು ಕ್ರೀಡಾಕೂಟ: ಮೂಡುಬಿದಿರೆಯ ವಿವಿದೆಡೆ ಆಮಂತ್ರಣ ಪತ್ರಿಕೆ ಹಂಚಿಕೆ

 

ಹೊಳಪು ಕ್ರೀಡಾಕೂಟ-2022 ಇದರ ಆಮಂತ್ರಣ ಪತ್ರಿಕೆಯನ್ನು ಇಂದು ಮೂಡುಬಿದಿರೆಯ ಎಲ್ಲಾ ಗ್ರಾಮ ಪಂಚಾಯತ್‌ಗಳು ಹಾಗೂ ಮೂಡುಬಿದಿರೆ ಪುರಸಭೆಗೆ ನೀಡಲಾಯಿತು. 

ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ|ಶಿವರಾಮ್ ಕಾರಂತ ಪ್ರತಿಷ್ಠಾನ ಕೋಟದ ಆಶ್ರಯದಲ್ಲಿ ರಾಜ್ಯದ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಅವರ ನೇತೃತ್ವದಲ್ಲಿ ನಡೆಯುವ ಹೊಳಪು 2022 ಈ ಕ್ರೀಡಾ ಕೂಟದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ನಗರ ಪಾಲಿಕೆ ಸದಸ್ಯರು ಮತ್ತು ಸಿಬ್ಬಂದಿಗೆ ಅವಕಾಶ ನೀಡಲಾಗುತ್ತದೆ. 




ದಿನಾಂಕ 26 ರಂದು ಕೋಟದ ವಿವೇಕ ಕಾಲೇಜು ಮೈದಾನದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಇಂದು ಮೂಡುಬಿದಿರೆಯ ಬೆಳವಾಯಿ, ಶಿರ್ತಾಡಿ, ವಾಲ್ಪಾಡಿ, ನೆಲ್ಲಿಕಾರು, ದರೆಗುಡ್ಡೆ, ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯತ್‌ಗಳು ಮತ್ತು ಪುತ್ತಿಗೆ, ಪಾಲಡ್ಕ, ತೆಂಕಮಿಜಾರು, ಹೊಸಬೆಟ್ಟು, ಇರುವ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ಗಳಿಗೆ ಚಾಲನೆ ನೀಡಲಾಯಿತು. 






ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಸು ಪೂಜಾರಿ, ಸದಸ್ಯರು ಹಾಗೂ ಸಚಿವರು ಆಪ್ತ ಸಹಾಯಕರಾದ ಪ್ರಕಾಶ್ ಹಂದಟ್ಟು, ದರೆಗುಡ್ಡೆ ಗ್ರಾ.ಪಂ. 

ಸದಸ್ಯರಾದ ದೀಕ್ಷಿತ್ ಪಣಪಿಲ ಈ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದರು.




Post a Comment

0 Comments

Advertisement