ಪಾದಾಚಾರಿಗೆ ಢಿಕ್ಕಿ ಹೊಡೆದ ಕಾಲೇಜು ವಿದ್ಯಾರ್ಥಿಯ ಬೈಕ್ :ಪಾದಾಚಾರಿ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ಕಾಲೇಜು ವಿದ್ಯಾರ್ಥಿಯ ಬೈಕೊಂಡು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಸಾವನ್ನಪ್ಪಿದ ಘಟನೆ ಗುರುವಾರ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಶಾಲ್ ನಗರದಲ್ಲಿ ನಡೆದಿದೆ.

 ವಿಶಾಲ್ ನಗರ ನಿವಾಸಿ ಜಯಚಂದ್ರ ಎಂಬವರು ಸಾವನ್ನಪ್ಪಿದ ವ್ಯಕ್ತಿ.  ಈ ಘಟನೆ ಸಂಭವಿಸುವ ಮೊದಲು ವಿಶಾಲ್ ನಗರದಲ್ಲಿ ಕಾಲೇಜು ವಿದ್ಯಾರ್ಥಿಯೋರ್ವನ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳ ಇನ್ನೊಂದು ಬೈಕ್ ರಸ್ತೆ ದಾಟುತ್ತಿದ್ದ ಜಯಚಂದ್ರ ಅವರಿಗೆ ಢಿಕ್ಕಿ ಹೊಡೆದಿದೆ.  ತೀವೃ ತರಹದ ಗಾಯಗಳಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Post a Comment

0 Comments